ಡೈಲಿ ವಾರ್ತೆ: 02/ಮೇ /2024

ಬೀದರ್: ವಿದ್ಯುತ್ ಕಂಬಕ್ಕೆ ಕ್ರೂಸರ್ ಡಿಕ್ಕಿ –  ಮೂವರು ದುರ್ಮರಣ

ಬೀದರ್: ಬೀದರ್ ತಾಲೂಕಿನ ಚಟ್ನಳ್ಳಿ ಬಳಿ ನೆಡೆದ  ಅಪಘಾತದಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕ್ರೂಸರ್ ವಾಹನ ಡಿಕ್ಕಿಯಾದ ಪರಿಣಾಮ ಕ್ರೂಸರ್ ವಾಹನದಲ್ಲಿದ್ದ ಐವರಲ್ಲಿ ಮೂವರು ಯುವಕರು ಸಾವನ್ನಪ್ಪಿದ್ದಾರೆ.

ಪ್ರದೀಪ್(25), ವಿನೋದ್(26), ವರ್ದೀಶ್(25) ಮೃತರು. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಬೀದರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.