ಕೋಟ : ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿ ಬೆಂಗ್ರೆಯಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿ ನೂತನವಾಗಿ ನಿರ್ಮಿಸುವ ನೀರಿನ ಟ್ಯಾಂಕ್ ಗೆ ಶಂಕು ಸ್ಥಾಪನೆಯನ್ನು ದಿನಾಂಕ 14 ರಂದು ಗ್ರಾ. ಪಂ. ಅಧ್ಯಕ್ಷರಾದ ಪ್ರಭಾಕರ ಮೆಂಡನ್ ನೇರವೇರಿಸಿದರು.


ಅವರು ಮಾತನಾಡಿ ಕೋಡಿ ಬೆಂಗ್ರೆಯ ಜನತೆಯ ಬಹುವರ್ಷದ ಕನಸು ನನಸಾಗುತ್ತಿದೆ ಹಾಗೂ ಕಮ್ಮಣ್ಣಿನಿಂದ HOP ಪೈಪ್ ಮುಖಾಂತರ ನೀರು ಸರಬರಾಜು ಮಾಡಲು ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಮಾತನಾಡಿ, ಇದು ಕೋಟಿ ಮೊತ್ತದ ಯೋಜನೆಯಾಗಿದ್ದು, ಪ್ರತಿ ಮನೆಗೆ ಕಾರ್ಯಾತ್ಮಕ ನಳ್ಳಿ ಸಂಪರ್ಕ ನೀಡಲಾಗುವುದು. ಹಾಗೂ ಸಮುದಾಯ ವಂತಿಗೆಯ ಅಗತ್ಯತೆ ಬಗ್ಗೆ ವಿವರಿಸಿದರು. ಪಂಚಾಯತ್ ರಾಜ್ ಕಿರಿಯ ಇಂಜಿನಿಯರ್ ರಾದ ಮೋಹನ್ ನಾಯ್ಕ, ಗ್ರಾ ಪಂ. ಸದಸ್ಯರಾದ ವಿನಯ್ ಅಮೀನ್, ಪ್ರಸಾದ್, ಕುಮಾರಿ ರಶ್ಮಿತಾ, ಶ್ರೀಮತಿ ಕುಸುಮ, ಗುತ್ತಿಗೆದಾರರಾದ ಜಯ ಕುಮಾರ್, ಪ್ರಶಾಂತ್, ಗಣೇಶ್, ಸ್ಥಳೀಯ ಗಣ್ಯರಾದ ನಾಗರಾಜ, ಮನೋಹರ್, ಜಯ ಎಸ್ ಕುಂದರ್ ಅಧ್ಯಕ್ಷರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಸಂದೀಪ್ ಕುಂದರ್ ಕೆ ಎಫ್ ಡಿ ಸಿ., ರಾಘವೇಂದ್ರ ಸುವರ್ಣ , ಕೋಡಿ, ಸಿಬ್ಬಂದಿ ಶ್ರೀ ಜಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ : ಇಬ್ರಾಹಿಂ ಕೋಟ