ಡೈಲಿ ವಾರ್ತೆ : 29 ಸೆಪ್ಟೆಂಬರ್ 2022

ಬಂಟ್ವಾಳ ವಲಯ ಸುನ್ನೀ ಮಹಲ್ ಪೆಡರೇಶನ್ ನೂತನ ಸಮಿತಿ ರಚನೆ. ಅಧ್ಯಕ್ಷರಾಗಿ ಇರ್ಷಾದ್ ದಾರಿಮಿ ಮಿತ್ತಬೈಲ್ ಆಯ್ಕೆ

ಬಿ ಸಿ ರೋಡ್ : ಸಮಸ್ತ ಉಲಮಾ ಒಕ್ಕೂಟದ ಆದೇಶದಂತೆ ಮೊಹಲ್ಲಾ ವ್ಯವಸ್ಥೆಗೆ ಕಾಯಕಲ್ಪ ನೀಡುವ ಗುರಿಯನ್ನು ಮುಂದಿಟ್ಟುಕೊಂಡು ದ.ಕ. ಜಿಲ್ಲಾದ್ಯಂತ ಸುನ್ನಿ ಮಹಲ್ ಪೆಡರೇಶನ್ ಪುನರ್ರಚಿಸಲಾಗುತ್ತಿದ್ದು ಇದರ ಭಾಗವಾಗಿ ಬಂಟ್ವಾಳ ವಲಯ ಸಮಿತಿಯನ್ನು ರೂಪೀಕರಿಸ ಲಾಯಿತು.

ಮಿತ್ತಬೈಲು ಇರ್ಷಾದ್ ದಾರಿಮಿ ಯವರ ಅಧ್ಯಕ್ಷತೆಯಲ್ಲಿ ಜಬ್ಬಾರ್ ಉಸ್ತಾದ್ ಗೃಹಾಂಗಣದಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ಮಹಾ ಸಭೆಯನ್ನು ಉದ್ಘಾಟಿಸಿದ ಜಿಲ್ಲಾ ದಾರಿಮಿ ಒಕ್ಕೂಟದ ಅದ್ಯಕ್ಷ ಕೆ.ಬಿ. ಉಸ್ತಾದ್
ಅವರು ಮಾತನಾಡಿ ಧರ್ಮದ ಆಚಾರ ವಿಚಾರಗಳನ್ನು ಪಾಲಿಸುವಂತಾಗಲು ರಚನಾತ್ಮಕ ಕಾರ್ಯಗಳಿಗೆ ಪ್ರಾಮುಖ್ಯತೆ ನೀಡ ಬೇಕು ಎಂದರು.

ಮುಖ್ಯ ಭಾಷಣಗೈದ ಉಸ್ತಾದ್ ಎಸ್.ಬಿ. ದಾರಿಮಿ ಉಪ್ಪಿನಂಗಡಿ ಮಾತನಾಡಿ ಮಸೀದಿಗಳನ್ನು ಕೇಂದ್ರೀಕರಿಸಿ ಜಾರಿಯಲ್ಲಿರುವ ಮೊಹಲ್ಲಾ ಪದ್ದತಿಯು ಪೂರ್ವಿಕರ ಅದ್ಭುತವಾದ ಪರಿಕಲ್ಪನೆಯಾಗಿದೆ.
ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಸ್.ಎಂ.ಎಪ್ ನ ಪಾತ್ರ ಬಹಳ ಮುಖ್ಯವಾಗಿದೆ. ಆದುದರಿಂದ ತಮ್ಮ ಮೊಹಲ್ಲಾಗಳನ್ನು ಎಸ್.ಎಮ್.ಎಫ್ ನೊಂದಿಗೆ ನೊಂದಾಯಿಸಲು ಪ್ರತೀ ಜಮಾತ್ ಸಮಿತಿ ಮುಂದಾಗ ಬೇಕು ಎಂದು ಕರೆ ನೀಡಿದರು.

ಕೆ.ಎಂ.ಎ ಕೊಡುಂಗಾಯಿ ಸ್ವಾಗತಿಸಿ, ಖಾದರ್ ಮಾಸ್ಟರ್ ಬಂಟ್ವಾಳ ವರದಿ ಮಂಡಿಸಿದರು.
ಇದೇ ವೇಳೆ ನೂತನ ಪಧಾದಿಕಾರಿ ಗಳನ್ನು ಆರಿಸಲಾಯಿತು.

ಅಧ್ಯಕ್ಷರಾಗಿ ಇರ್ಶಾದ್ ದಾರಿಮಿ ಮಿತ್ತಬೈಲು,
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮಾಸ್ಟರ್ ಬಂಟ್ವಾಳ,
ಕಾರ್ಯದರ್ಶಿ ಮುಹಮ್ಮದ್ ರಫೀಕ್ ಹಾಜಿ ನೇರಳಕಟ್ಟೆ
ಕೋಶಾಧಿಕಾರಿ
ಅಬ್ದುಲ್ ಹಕೀಂ  ಪರ್ತಿಪ್ಪಾಡಿ



ಅಧ್ಯಕ್ಷರಾಗಿ ಇರ್ಶಾದ್ ದಾರಿಮಿ ಮಿತ್ತಬೈಲು, ಉಪಾಧ್ಯಕ್ಷರುಗಳಾಗಿ
ಕೆ.ಬಿ.ಅಬ್ದುಲ್ ಖಾದಿರ್ ದಾರಿಮಿ
ಕೊಡಂಗಾಯಿ , ಮುಹಮ್ಮದ್ ಹಾಜಿ ಸಾಗರ್ ಮಿತ್ತಬೈಲು, ಯೂಸುಫ್ ಬದ್ರಿಯಾ ಕೊಳತ್ತಮಜಲು, ಅಬ್ದುಲ್ ಲತೀಫ್ ಬಾಂಬಿಲ,
ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಮಾಸ್ಟರ್ ಬಂಟ್ವಾಳ, ವರ್ಕಿಂಗ್ ಕಾರ್ಯದರ್ಶಿ ಯಾಗಿ ಮುಹಮ್ಮದ್ ರಫೀಕ್ ಹಾಜಿ ನೇರಳಕಟ್ಟೆ, ಜೊತೆ ಕಾರ್ಯದರ್ಶಿ ಗಳಾಗಿ ಅಬ್ದುಲ್‌ ಲತೀಫ್ ಹಾಜಿ ಬೋಳಿಯಾರ್, ಕೆ.ಎಂ.ಎ. ಕೊಡುಂಗಾಯಿ, ಶರೀಫ್ ಮೂಸಾ ಕುದ್ದುಪದವು, ಕೋಶಾಧಿಕಾರಿಯಾಗಿ
ಅಬ್ದುಲ್ ಹಕೀಂ ಪರ್ತಿಪ್ಪಾಡಿ ಅವರು ಆಯ್ಕೆಯಾದರು.

ಹಾಗೂ 17 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು.