ಡೈಲಿ ವಾರ್ತೆ : 30 ಸೆಪ್ಟೆಂಬರ್ 2022

ಕೋಟ: ಕೋಟಿ ಗೀತಾ ಲೇಖನಯಜ್ಞ ಕಾರ್ಯಕ್ರಮದ ಅಭಿಯಾನ

ಕೋಟ: ದುಃಖ ನಿವೃತ್ತಿಯಾಗಿ ಸುಖ ಪ್ರಾಪ್ತಿಯಾಗಬೇಕಾದರೆ ನಿರಂತರ ಭಗವಂತನ ಧ್ಯಾನ ಒಂದೇ ಪರಿಹಾರವೆಂದು ಉಡುಪಿ ಪುತ್ತಿಗೆ ಮಠದ ಕೋಟಿ ಗೀತಾ ಲೇಖನ ಯಜ್ಞ ನಾರಾಯಣ ಪ್ರಖಂಡದ ಮುಖ್ಯಸ್ಥ ಮಹಿತೋಷ್ ಆಚಾರ್ಯ ಹೇಳಿದರು.

ಅವರು ಕೋಟ ಶಿಶುಮಂದಿರದಲ್ಲಿ ಉಡುಪಿಯ ಪುತ್ತಿಗೆ ಮಠದ ವತಿಯಿಂದ ಹಮ್ಮಿಕೊಂಡ ಕೋಟಿ ಗೀತಾ ಲೇಖನಯಜ್ಞ ಕಾರ್ಯಕ್ರಮದ ಅಭಿಯಾನದಲ್ಲಿ ಮಾತನಾಡಿ ಸಮಸ್ಯೆ ಬಂದಾಗ ದೇವರ ಧ್ಯಾನ ಮಾಡುವುದು ಅಥವಾ ಬಗೆಹರಿದಾಗ ಅವನ ನೆನಪುಬಿಡುವುದು ನಾವುಗಳು ಕಾಣುತ್ತಿದ್ದೆವೆ ಆದರೆ
ಈ ಕಲಿಯುಗದಲ್ಲಿ ದೇವನಾಮ ಸ್ಮರಣೆ ನಿತ್ಯನಿರಂತರವಾದಗ ಕಷ್ಟಗಳು ಮಾಯವಾಗಿ ದೇವ ಒಲುಮೆಯ ಸುಖ
ಅನುಷ್ಠಾನಗೊಳ್ಳುತ್ತದೆ.

ಭಗವಂತನು ನರಮಾನವನನ್ನು ಭೂಮಿಯ ಮೇಲೆ ಹುಟ್ಟಿಸಿದ್ದು
ಭಗವಂತನ ಸೇವೆ ಮಾಡಲಿಕ್ಕೆ ವಿನಹ ಪಾಪಗಳನ್ನು
ಅತಿಹೆಚ್ಚುಗೈಯಲು ಅಲ್ಲ ಬದಲಾಗಿ ಭಗವಂತನನ್ನು
ಆರಾಧಿಸುವ ಕಾರ್ಯ ಮಾಡಬೇಕು ಅದು ಹೇಗೆ ಎಂದರೆ
ಭಗವದ್ಗೀತೆ ಪಠಣಮಾಡುವುದು,ಅದನ್ನು ಕರಾರುವಕ್ಕಾಗಿ ಅನುಷ್ಠಾನಗೊಳಿಸಿಕೊಳ್ಳುವದು ಆಗ ಮಾತ್ರ ಮನುಷ್ಯರಾಗಿ ಹುಟ್ಟಿದಕ್ಕೆ ಸಾರ್ಥಕತೆ ಕಾಣಬಹುದಾಗಿದೆ ಎಂದರಲ್ಲದೆ ಉಡುಪಿ ಪುತ್ತಿಗೆ ಮಠದ ಸ್ವಾಮೀಜಿಗಳ ನಿರ್ದೇಶನದಂತೆ ಕೋಟಿ ಗೀತಾಲೇಖನದ ಮೂಲಕ ಭಗವಂತನ ಅತಿಸನಿಹ ಸೇವೆ ಮಾಡಿದಂತೆ ಅದಕ್ಕಾಗಿ ಎಲ್ಲರೂ ಕೈಜೋಡಿಸಲು ಕರೆಇತ್ತರು.

ಇನ್ನೊರ್ವ ಪುತ್ತಿಗೆ ಮಠದ ಗೋವರ್ಧನ ಆಚಾರ್ಯರು ಕೋಟಿ ಗೀತಾ ಲೇಖನಯಜ್ಞದ ಮಹತ್ವವನ್ನು ಹಾಡಿನ ಮೂಲಕ ವಿವರಿಸಿದರು.

ಇದೇ ಸಂದರ್ಭದಲ್ಲಿ ಮಠದ ಆಚಾರ್ಯರಿಗೆ ಫಲಪುಷ್ಭಗಳನ್ನು ನೀಡಿ ಸ್ವಾಗತಿಸಲಾಯಿತು.
ಕೋಟ ಕಾಶೀಮಠದ ಅರ್ಚಕ ಶ್ರೀ ದೇವದತ್ತ ಭಟ್ ,ಶಿಶು
ಮಂದಿರದ ಉಪಾಧ್ಯಕ್ಷೆ ಗೀತಾ ಎ ಕುಂದರ್‍ಉಪಸ್ಥಿತರಿದ್ದರು. ಶಿಶುಮಂದಿರದ ಅಧ್ಯಕ್ಷೆ ನಾಗಲಕ್ಷ್ಮೀ ಹೆಗ್ಡೆ ಪ್ರಾಸ್ತಾವನೆ ಸಲ್ಲಿಸಿದರು.

ಕಾರ್ಯಕ್ರಮವನ್ನು ಶಿಶುಮಂದಿರದ ವ್ಯವಸ್ಥಾಪಕಿ ಭಾಗ್ಯವಾದಿರಾಜ್ ಪರಿಚಯಿಸಿ ಸ್ವಾಗತಿಸಿ ನಿರೂಪಿಸಿದರು.
ಕಾರ್ಯಕ್ರಮದ ನಂತರ ಕೋಟಿ ಗೀತಾಲೇಖದ
ಅಭಿಯಾನ ಕೈಗೊಳ್ಳಲಾಯಿತು.

ಶಿಶುಮಂದಿರದ ಕಾರ್ಯದರ್ಶಿ ಸುಷ್ಮಾ ಹೊಳ್ಳ ವಂದಿಸಿದರು.