ಡೈಲಿ ವಾರ್ತೆ: 31 ಅಕ್ಟೋಬರ್ 2022

ಕೋಟತಟ್ಟು ಪಡುಕರೆ ಹಾಲು ಉತ್ಪಾದಕರಿಂದ ಪ್ರತಿಭಟನೆ


ಕೋಟ: ಎಲ್ಲಾ ದಿನಬಳಕೆಯ ವಸ್ತುಗಳು ದಿನದಿಂದ ದಿನಕ್ಕೆ ಏರುತ್ತಿದೆ ಆದರೆ ಅತಿ ಅವಶ್ಯಕವಾಗಿರುವ cಹಾಲು ಮತ್ತು ಭತ್ತದ ದರದಲ್ಲಿ ಯಾವುದೇ ರೀತಿಯ ಏರಿಕೆ ಕಾಣುವುದಿಲ್ಲ ಇದಕ್ಕೆ ಸರಕಾರನೇ ನೇರ ಕಾರಣ ಎಂದು ಕೋಟತಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಶಿವಮೂರ್ತಿ ಕೆ ಹೇಳಿದರು.

ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ಸಹಕಾರಿ ಸಂಘ ಕೋಟತಟ್ಟು ಇದರ ನೇತ್ರತ್ವದಲ್ಲಿ ಹಾಲಿನ ದರ ಏರಿಸಬೇಕೆಂದು ಆಗ್ರಹಿಸಿ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ ಮೂಲವಾಗಿ ಪ್ರೋತ್ಸಾಹಿಸಬೇಕಾದ ಹೈನುಗಾರ ಮತ್ತು ಕೃಷಿಕರ ಬಗ್ಗೆ ಸರಕಾರ ನಿರ್ಲಕ್ಷೀಯ ಧೋರಣೆ ಅನುಸರಿಸುತ್ತಿದೆ ಇದೇ ರೀತಿ ಮುಂದುವರಿದರೆ ಹಾಲಿನ‌ ಸಂಗ್ರಹ ದಯನೀಯ ಸ್ಥಿತಿ ತಲುಪುವುದರಲ್ಲಿ ಅನುನಾನವೇ ಇಲ್ಲ ಪ್ರೋತ್ಸಾಹ ನೀಡಿ ಸಲಹಬೇಕಾದ ವ್ಯವಸ್ಥೆಗೆ ಸರಕಾರ ಹಿಂದೆಮುಂದೆ ನೋಡುವ ಸ್ಥಿತಿ‌ಸೃಷ್ಠಿಸಿದೆ ಇದೇ ರೀತಿ ಮುಂದುವರಿದರೆ ಕೃಷಿ‌ ಹಾಗೂ‌ ಹೈನುಗಾರಿಕೆ ಇತಿಹಾಸ ಪುಟ ಸೇರಲಿದೆ ಯುವ ಸಮುದಾಯಕ್ಕೆ ಈ ಕಾರ್ಯಕ್ಕೆ ಬರಬೇಕಾದರೆ ಹಾಲಿನ ದರದಲ್ಲಿ ಕನಿಷ್ಠ 50ರೂ ಲೀಟರ್ ಗೆ ಏರಿಸಬೇಕು ಆಗ ಮಾತ್ರ ಆಸಕ್ತಿಯಿಂದ ಈ ಕ್ಷೇತ್ರದಲ್ಲಿ ತೋಡಗಿಕೊಳ್ಳಲು ಸಾಧ್ಯ ಶೀಘ್ರದಲ್ಲಿ ಹಾಲಿನ ದರ ಏರಿಕೆಗೊಳಿಸದಿದ್ದರೆ ಹಾಲನ್ನು ಸ್ಥಗಿತಗೊಳಿಸಿ ಪ್ರತಿಭಟಿಸಬೇಕಾದಿತು ಎಂದು‌ ಎಚ್ಚರಿಸಿದರು.



ಸಂಘದ ಉಪಾಧ್ಯಕ್ಷ ಭಾಸ್ಕರ್ ಶೆಟ್ಟಿ ಮಾತನಾಡಿ
ಪ್ರಸ್ತುತ ಕಾಲಘಟ್ಟದಲ್ಲಿ ಮೌಲ್ಯಯುತವಾದ ಹೈನುಗಾರಿಕೆ ಕ್ಷಿಣಿಸುತ್ತಿದೆ.ಯುವ ಸಮುದಾಯ‌ಆಸಕ್ತಿಯಿಂದ ವಂಚಿತರಾಗುತ್ತಿದ್ದಾರೆ ಇದಕ್ಕೆ ಕಾರಣ ಹಾಲಿದ ದರ ಕನಿಷ್ಟಪಕ್ಷ 50ನಿಗದಿಪಡಿಸಬೇಕು ಆಗ ಹೈನುಗಾರಿಕೆಯ ಬಗ್ಗೆ ಒಲವು ತೊರಲು ಸಾಧ್ಯ ಸರಕಾರ ಈ ಬಗ್ಗೆ ಕಾರ್ಯೊನ್ಮುಖವಾಗಿ ಸಮರ್ಪಕ‌ದರ ನಿಗದಿಪಡಿಸಲಿ ಎಂದು‌ಆಗ್ರಹಿದರು.

ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀಣಾರವರಿಗೆ ಮನವಿ ಸಲ್ಲಿಸಲಾಯಿತು.
ಹಾಲು ಉತ್ಪಾದಕ ಸಂಘದ ನಿರ್ದೇಶಕರಾದ ಕೃಷ್ಣ ಹಂದೆ, ಜಯರಾಮ ಶೆಟ್ಟಿ,ಹಾಲು ಉತ್ಪಾದಕರು ಉಪಸ್ಥಿತರಿದ್ದರು.