ಡೈಲಿ ವಾರ್ತೆ: 07/ಮೇ /2024

ಕೊಪ್ಪಳ, ರಾಯಚೂರಿನಲ್ಲಿ ಮತದಾನದಿಂದ ದೂರ ಉಳಿದ ಮತದಾರರು

ಕೊಪ್ಪಳ/ರಾಯಚೂರು: ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ಕೆಲ ಗ್ರಾಮದಲ್ಲಿ ಮತದಾರರು ಮತದಾನ ಮಾಡದೆ ದೂರ ಉಳಿದ ಘಟನೆ ನಡೆದಿದೆ.

ಕೆಲವು ದಿನಗಳ ಹಿಂದೆ ಗ್ರಾಮದ ಗರ್ಭಿಣಿ ಮಹಿಳೆ ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಾವನ್ನಪ್ಪಿದ ಘಟನೆ‌ ಹಿನ್ನಲೆ ಡಾ.ಕಾವೇರಿ ಶ್ಯಾವಿ ಅವರನ್ನು ವರ್ಗಾವಣೆ ಅಥವಾ ಅಮಾನತು‌ ಮಾಡಲು ಒತ್ತಾಯಿಸಿ ಕೊಪ್ಪಳ ಜಿಲ್ಲೆಯ ತಾವರಗೇರಾದಲ್ಲಿ ಮತದಾನದಿಂದ ದೂರ ಉಳಿದಿದ್ದಾರೆ. ಪ್ಟಣದ 18ನೇ ವಾರ್ಡ ವ್ಯಾಪ್ತಿ ಮತಗಟ್ಟೆ ಸಂಖ್ಯೆ 142ರಲ್ಲಿ ಇನ್ನೂ ನಡೆಯದ ಮತದಾನ ಈ ಮತಗಟ್ಟೆಯಲ್ಲಿ 862 ಮತದಾರರಿದ್ದಾರೆ. ವೈದ್ಯರ ಅಮಾನತು ಮಾಡಿದರೆ ಮತದಾನ‌ ಮಾಡುತ್ತೇವೆ ಇಲ್ಲವಾದರೆ ಮತದಾನ ಮಾಡಲ್ಲ ಎಂದು ಪಟ್ಟು ಹಿಡಿದ ವಾರ್ಡಿನ ಮತದಾರರು ಘಟನಾ ಸ್ಥಳಕ್ಕೆ ತಹಶೀಲ್ದಾರ ರವಿ ಅಂಗಡಿ, ಡಿವೈಎಸ್ಪಿ ಸಿದ್ದನಗೌಡ ಪಾಟೀಲ್, ಸಿಪಿಐ ಯಶವಂತ್ ಬಿಸನಹಳ್ಳಿ, ಪಿಎಸ್ಐ ಸುಜಾತ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ.

ರಾಯಚೂರು:
ರಾಯಚೂರಿನ ಮಾನ್ವಿ ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಮತದಾನ ಬಹಿಷ್ಕಾರ ಗ್ರಾಮದಲ್ಲಿ‌ ಕುಡಿಯುವ ನೀರಿನ ತೊಂದರೆ ಸರಿಪಡಿಸುವಂತೆ ಆಗ್ರಹಿಸಿ ಗ್ರಾಮದ ಮತಗಟ್ಟೆ ಸಂಖ್ಯೆ 254 ಹಾಗೂ 255 ರಲ್ಲಿ ಮತದಾನ ಸ್ಥಗಿತಗೊಂಡಿದೆ.
ಮತದಾನ ಕೇಂದ್ರಕ್ಕೆ ಯಾರೂ ಹೋಗದಂತೆ ಎತ್ತಿನಬಂಡಿಗಳನ್ನ ಅಡ್ಡಗಟ್ಟಿ ಬಹಿಷ್ಕಾರ, ನೀರಿನ ಟ್ಯಾಂಕ್, ಕೊಡಗಳನ್ನ ತುಂಬಿ ಬಂಡಿಗಳನ್ನ ತಂದ ಗ್ರಾಮಸ್ಥರು. ಈ ವೇಳೆ ಸ್ಥಳಕ್ಕೆ ಬಂದ ಚುನಾವಣಾ ಅಧಿಕಾರಿಗಳು ಮತದಾರರ ಮನವೊಲಿಸಲು ಯತ್ನಿಸುತ್ತಿದ್ದಾರೆ ಆದರೆ ಅಧಿಕಾರಿಗಳ ಮಾತುಕತೆಗೆ ಗ್ರಾಮಸ್ಥರು ಮಾತ್ರ ಸ್ಪಂಧಿಸುತ್ತಿಲ್ಲ ಎನ್ನಲಾಗಿದೆ.