ಡೈಲಿ ವಾರ್ತೆ: 07/ಮೇ /2024

ಆಂಬುಲೆನ್ಸ್ ಹಾಗೂ ಕಾರಿನ ನಡುವೆ ಬೀಕರ ಅಪಘಾತ: ಮೂವರು ಮೃತ್ಯು, ನಾಲ್ವರು ಗಾಯ

ಮಂಜೇಶ್ವರ: ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರದಲ್ಲಿ ಆಂಬುಲೆನ್ಸ್ ಮತ್ತು ಕಾರೊಂದರ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು  ಮೃತಪಟ್ಟ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಮೃತರನ್ನು ಕಾರಿನಲ್ಲಿದ್ದ ತ್ರಿಶೂರು ಗುರುವಾಯನೂರು ನಿವಾಸಿಗಳಾದ ಶ್ರೀನಾಥ್, ಶರತ್, ಮೆನೋನ್ ಎಂದು ಗುರುತಿಸಲಾಗಿದೆ
ಆಂಬುಲೆನ್ಸ್ನಲ್ಲಿದ್ದ ರೋಗಿಯು ಕೂಡ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ

ಕಾಸರಗೋಡಿನಿಂದ ಮಂಗಳೂರು ಕಡೆ ರೋಗಿಯನ್ನು ಕರೆದೊಯ್ಯುತ್ತಿದ್ದ  ಆಂಬುಲೆನ್ಸ್ ಮತ್ತು ಮಂಗಳೂರು ಕಡೆಯಿಂದ ಮಂಜೇಶ್ವರದತ್ತ ಬರುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಪಘಾತದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಇನ್ನೋರ್ವ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು   ಅಂಬುಲೆನ್ಸ್ ರಸ್ತೆಯಲ್ಲಿ ಮುಗುಚಿ ಬಿದ್ದಿದೆ ಎಂದು ತಿಳಿದು ಬಂದಿದೆ.