ಡೈಲಿ ವಾರ್ತೆ: 01 ನವಂಬರ್ 2022

ವರದಿ: ಶಿವಾನಂದ ಆರ್.ಬಿದರಕುಂದಿ.

ಗಾಣಗಾಪುರದಲ್ಲಿ ಪುನರ್ವಸತಿ ಕೇಂದ್ರಕ್ಕೆ ಒತ್ತಾಯಿಸಿ: ಜಿಲ್ಲಾಧಿಕಾರಿ ಕಚೇರಿ ಎದುರು ಸಿಪಿಐ, ಮಹಿಳಾ ಒಕ್ಕೂಟದಿಂದ ಪ್ರತಿಭಟನೆ.


ಕಲಬುರಗಿ: ದೇವಲ ಗಾಣಗಾಪುರದಲ್ಲಿ ಮಾನಸಿಕ ಅಸ್ವಸ್ಥರು ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ರಕ್ಷಣೆ ಮತ್ತು ವಸತಿಗಾಗಿ ವಸತಿ ನಿಲಯವು ನಿರಾಶ್ರಿತರ ಪುನರ್ವಸತಿ ಕೇಂದ್ರವಾಗಬೇಕು ಎಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಹಾಗೂ ಭಾರತೀಯ ಮಹಿಳಾ ರಾಷ್ಟ್ರೀಯ ಒಕ್ಕೂಟ (ಎನ್‌ಎಫ್‌ಐಡಬ್ಲ್ಯು) ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಗಾಣಗಾಪುರಕ್ಕೆ ವೃದ್ಧರನ್ನು ತಂದು ಬಿಟ್ಟು ಹೋಗುತ್ತಿರುವುದರಿಂದ ಘನತೆಯ ಬದುಕು ನಡೆಸಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಅನಾರೋಗ್ಯ ನರಳಾಡುತ್ತಾ ರಸ್ತೆಯಲ್ಲೇ ಪ್ರಾಣಬಿಟ್ಟ ವೃದ್ಧೆಯೊಬ್ಬರನ್ನು ನಾಯಿಗಳು ತಿಂದು ಹಾಕಿವೆ. ಇದು ಸಂವಿದಾನದ ಆಶಯಗಳು ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆ. ಇಂತಹ ಮರುಕಳಿಸದಂತೆ ಕ್ರಮ ಜರುಗಿಸಬೇಕು’ ಎಂದು ಪ್ರತಿಭಟನಾಕಾರರು ವೀಕ್ಷಿಸಿದರು.

ಚಾಮರಾಜನಗರ ಹಂಗಳ ಗ್ರಾಮದಲ್ಲಿ ಮನೆಯ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಕೆಂಚಮ್ಮ ಎಂಬವರಿಗೆ ಸಚಿವ ವಿ. ಸೋಮಣ್ಣ ಕಪಾಳಕ್ಕೆ ಹೊಡೆದು ಅಪಮಾನಿಸಿದ್ದಾರೆ.

ಜವಾಬ್ದಾರಿ ಸ್ಥಾನದಲ್ಲಿರುವ ಸಚಿವ ಸಮಸ್ಯೆ ಹೇಳಲು ಬಂದ ಮಹಿಳೆಗೆ ಕಪಾಳಕ್ಕೆ ಹೊಡೆದು, ಕಾನೂನನ್ನು ಕೈಗೆತ್ತಿಕೊಂಡಿದ್ದಾರೆ. ಇದು ಜನವಿರೋಧಿ ಧೋರಣೆ ಇದೆ’ ಎಂದು ಹೇಳಿದರು.

ಸಿಪಿಐ ನಗರ ಘಟಕದ ಕಾರ್ಯದರ್ಶಿ ಪದ್ಮಾವತಿ ಎನ್. ಮಾಲಿಪಾಟೀಲ, ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ವಿಜಯಲಕ್ಷ್ಮಿ ಯಳಸಂಗಿ, ಮಹ್ಮದ್ ಹುಸೇನಿ ಮೆಕ್ಯಾನಿಕ್, ಭಾಗಮ್ಮ ಎಂ. ಪೂಜಾರಿ, ಶಿವಲೀಲಾ ಎಸ್. ಅಷ್ಟಗಿ, ಸಿದ್ದಮ್ಮ ಎಸ್. ಪೊಲೀಸ್ ಪಾಟೀಲ, ನಾಗಮ್ಮ ಎಸ್. ಮಹಾದೇವಿ ಎಂ. ಪೂಜಾರಿ ಇಬ್ಬರು.