ಡೈಲಿ ವಾರ್ತೆ: 14/ಮೇ /2024
ಎನ್.ಎನ್.ಒ ಕುಂದಾಪುರ ಕಮ್ಯುನಿಟಿ ಸೆಂಟರ್ ನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ವೃತ್ತಿ ಮಾರ್ಗದರ್ಶನ
ಎನ್.ಎನ್.ಒ ಕುಂದಾಪುರ ಕಮ್ಯುನಿಟಿ ಸೆಂಟರ್, ಎನ್.ಎನ್.ಒ ವಿಶನರ್ಸ್ ಅಕಾಡೆಮಿ ಮತ್ತು ಪುತ್ತೂರು ಕಮ್ಯುನಿಟಿ ಸೆಂಟರ್ ಇವರ ಜಂಟಿ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮ ಕುಂದಾಪುರದ ಕಮ್ಯುನಿಟಿ ಸೆಂಟರ್ ನಲ್ಲಿ ಜರುಗಿತು.
ಹೆಬ್ರಿ ಘಟಕದ ಮೊಹಮ್ಮದ್ ರಬೀ ರವರು ಕುರಾನ್ ಪಠಣದ ಮೂಲಕ ಚಾಲನೆ ನೀಡಿದರು.
ಎನ್.ಎನ್.ಒ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹಾಗು ಟ್ರಸ್ಟ್ ನ ಸದ್ಯಸ್ಯರಾದ ಹುಸೇನ್ ಹೈಕಾಡಿಯವರು ಉದ್ಘಾಟನೆಯನ್ನು ನೆರೆವೇರಿಸಿ, ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಆದ ನಂತರ ಮುಂದೇನು ಮಾಡಬೇಕು ಎನ್ನುವ ಗೊಂದಲದಲ್ಲಿರುತ್ತಾರೆ.
ಪ್ರತಿ ವಿದ್ಯಾರ್ಥಿಯು ತನ್ನ ಪೊಷಕರೊಂದಿಗೆ ಇಲ್ಲಿಗೆ ಬಂದಿದ್ದು ಪುತ್ತೂರು ಕಮ್ಯುನಿಟಿ ಸೆಂಟರ್ ನ ಅನುಭವಿ ಕೌನ್ಸೆಲರ್ಸ್ ಜೊತೆ ಸುಮಾರು 30 ನಿಮಿಷ ಚರ್ಚಿಸಿದ ಬಳಿಕ ತಮ್ಮ ವೃತ್ತಿ ಜೀವನವನ್ನು ತೀರ್ಮಾನಿಸಲು ಅನುವು ಮಾಡಿಕೊಡಲು ಇಂದಿನ ವೇದಿಕೆ ಸಜ್ಜು ಮಾಡಲಾಗಿದೆ ಎಂದು ಅವರು ನುಡಿದರು.
ಬೈಂದೂರು ಘಟಕದ ಉಪಾಧ್ಯಕ್ಷರಾದ ಮಮ್ದು ಇಬ್ರಾಹಿಂ ರವರು ತಮ್ಮ ಸರಕಾರಿ ಶಿಕ್ಷಕ ಜೀವನದ ಕುರಿತು ಮಾತನಾಡಿ ವಿದ್ಯಾರ್ಥಿಗಳಲ್ಲಿ ಸರಕಾರಿ ವೃತ್ತಿಯ ಬಗ್ಗೆ ಅರಿವು ಮೂಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಎನ್.ಎನ್.ಒ ಉಡುಪಿ ಜಿಲ್ಲಾ ಅಧ್ಯಕ್ಷರಾದ ಮುಸ್ತಾಕ್ ಅಹ್ಮದ್ ಬೆಳ್ವೆ ವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಎನ್.ಎನ್.ಒ ಟ್ರಸ್ಟ್ ಸದ್ಯಸ್ಯರಾದ ಪೀರು ಸಾಹೇಬ್ ಉಡುಪಿ, ಎನ್.ಎನ್.ಒ ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಿಹಾರ್ ಅಹ್ಮದ್ ಕುಂದಾಪುರ, ಪುತ್ತೂರು ಕಮ್ಯುನಿಟಿ ಸೆಂಟರ್ ನ ಹನೀಫ್ ಪುತ್ತೂರು, ರಫೀಕ್ ಮಾಸ್ಟರ್, ಇಮ್ತಿಯಾಜ್ ಸಾಹೇಬ್, ಇಂಜಿನಿಯರ್ ಅಸೊಸಿಯೇಷನ್ ನ ಅಧ್ಯಕ್ಷರಾದ ಇಂಜಿನಿಯರ್ ಇಕ್ಬಾಲ್ ಕುಂದಾಪುರ, ಬ್ಯಾರೀಸ್ ಕಾಲೇಜಿನ ಪ್ರಾಂಶುಪಾಲರಾದ ಡಾ ಸಮೀರ್, ಎನ್.ಎನ್.ಒ ಉಡುಪಿ ಜಿಲ್ಲಾ ಸದಸ್ಯರಾದ ಮೌಲಾನ ಫಝಲ್ ಕಂಡ್ಲೂರು, ಎನ್.ಎನ್.ಒ ಟ್ರಸ್ಟ್ ಸದ್ಯಸ್ಯರಾದ ಝಮೀರ್ ಅಹ್ಮದ್ ರಶಾದಿ, ಎನ್.ಎನ್.ಒ ಉಡುಪಿ ಜಿಲ್ಲೆಯ ಮಾಜಿ ಉಪಾಧ್ಯಕ್ಷರಾದ ಎಸ್.ಎಮ್. ಇರ್ಷಾದ್ ನೇಜಾರು ಇನ್ನಿತರರು ಉಪಸ್ಥಿತರಿದ್ದರು.
ಇಂದಿನ ಕಾರ್ಯಕ್ರಮದಲ್ಲಿ ಸ್ವಯಂಸೇವಕರಾಗಿ ಎನ್.ಎನ್.ಒ ವಿಶನರ್ಸ್ ಅಕಾಡೆಮಿಯ ಯುವಕರಾದ ಅಬ್ದುಲ್ ರಾಝಿಕ್, ಮೊಹಮ್ಮದ್ ಮುಫಝಲ್, ಬಿಡಿ ಅಹಮದ್, ಮೊಹಮ್ಮದ್ ರಬೀ, ಅಸ್ಫಾನ್ ಶಾನು, ಮೊಹಮ್ಮದ್ ಅರ್ಶ್ ಮತ್ತು ಎನ್.ಎನ್.ಒ ಕುಂದಾಪುರ ಕಮ್ಯುನಿಟಿ ಸೆಂಟರ್ ಸಿಬ್ಬಂದಿ ಸಿಮ್ರನ್ ರವರು ಕಾರ್ಯನಿರ್ವಹಿಸಿದರು.
ಕೇಂದ್ರ ಸಮಿತಿಯ ಅಧ್ಯಕ್ಷ ರಾದ
ಮೊಹಮ್ಮದ್ ಸಲೀಮ್ ಮೂಡಬಿದ್ರೆ, ಕುಂದಾಪುರ ಕಮ್ಯುನಿಟಿ ಸೆಂಟರ್ ಇದರ ಅಧ್ಯಕ್ಷರಾದ ಅಬ್ದುಲ್ ಮುನಾಫ್ ಹಂಗಾರಕಟ್ಟೆ ಇವರ ಮಾರ್ಗದರ್ಶನ ದಲ್ಲಿ ಈ ಕಾರ್ಯಕ್ರಮ ನಡೆಯಿತು.
ಸುಮಾರು 85 ವಿದ್ಯಾರ್ಥಿಗಳು 120 ಪೋಷಕರು ಸೇರಿ ಸುಮಾರು 205 ಪ್ರತಿನಿಧಿ ಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಬೈಂದೂರು ಘಟಕದ ಅಧ್ಯಕ್ಷ ಅಬ್ದುಲ್ ಸಮಿ ಹಳಗೇರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.