ಡೈಲಿ ವಾರ್ತೆ:10 ಜನವರಿ 2023

ದುಬೈಯಿಂದ ಚಾಕಲೇಟ್ ಪೌಡರ್ ನಲ್ಲಿಟ್ಟು ಲಕ್ಷಾಂತರ ರೂ. ಮೌಲ್ಯದ ಚಿನ್ನ ಸಾಗಾಟ

ತಮಿಳುನಾಡು: ಚಾಕೊಲೇಟ್ ಪೌಡರ್ನಲ್ಲಿಟ್ಟು 200 ಗ್ರಾಂ ಚಿನ್ನದ ಸರವನ್ನು ದುಬೈಯಿಂದ ತಿರುಚಿನಾಪಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗಿಸುತ್ತಿದ್ದ ಪ್ರಯಾಣಿಕನಿಗೆ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

21 ಲಕ್ಷ ರೂ. ಮೌಲ್ಯದ ಚಿನ್ನವನ್ನು ಚಾಕೊಲೇಟ್ ಪೌಡರ್ನಲ್ಲಿ‌‌ ಈತ ಇಟ್ಟಿದ್ದ ಎನ್ನಲಾಗಿದೆ.

ಏರ್ ಇಂಡಿಯಾ ವಿಮಾನದ ಮೂಲಕ ದುಬೈನಿಂದ ಆಗಮಸಿದ ಪ್ರಯಾಣಿಕರ ಬ್ಯಾಗ್ಗಳನ್ನು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದರು.ಈ ವೇಳೆ ಚಾಕೆಲೆಟ್ ಪೌಡರ್ ನಲ್ಲಿ ಚಿನ್ನ ಪತ್ತೆಯಾಗಿದೆ.

ಇದೀಗ ಕಸ್ಟಮ್ ಅಧಿಕಾರಿಗಳು ಪ್ರಯಾಣಿಕನನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ.