
ಡೈಲಿ ವಾರ್ತೆ:18 ಜನವರಿ 2023
ಉಪ್ಪಿನಂಗಡಿ: ಟಯರ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ ಸ್ಫೋಟ ಕಾರ್ಮಿಕ ಸಾವು

ದಕ್ಷಿಣ ಕನ್ನಡ : ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಟಯರ್ ರಿಸೋಲ್ ಅಂಗಡಿಯೊಂದರಲ್ಲಿ (Tyre Shop) ಏರ್ ಕಂಪ್ರೆಸರ್ ಸ್ಫೋಟಗೊಂಡು ಕಾರ್ಮಿಕ ಮೃತಪಟ್ಟ ಘಟನೆ ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ಉಪ್ಪಿನಂಗಡಿ ಗಾಂಧಿ ಪಾರ್ಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಡಿಯನ್ ಟಯರ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಆಲಂಕಾರು ಮೂಲದ ರಾಜೇಶ್ ಪೂಜಾರಿ (43) ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ರಾಜೇಶ್‍ರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕೂಡಲೇ ಕರೆದೊಯ್ದರೂ ಅಷ್ಟೋತ್ತಿಗಾಗಲೇ ಮೃತಪಟ್ಟಿದ್ದರು. ಸ್ಥಳಕ್ಕೆ ಉಪ್ಪಿನಂಗಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.