ಡೈಲಿ ವಾರ್ತೆ:18 ಜನವರಿ 2023
ಜ. 23 ರಂದು ಕೋಟದಲ್ಲಿ ಉಡುಪ ಸಂಸ್ಮರಣೆ, ಪ್ರಶಸ್ತಿ ಪ್ರದಾನ
ಕೋಟ :ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳ ಆಯೋಜನೆಯಲ್ಲಿ ಕೋಟದ ಪಟೇಲರ ಮನೆಯ ಅಂಗಣದಲ್ಲಿ ಜನವರಿ 23, ಸೋಮವಾರದಂದು ಸಂಜೆ 3. 30 ಕ್ಕೆ ರಾಷ್ಟ್ರಪ್ರಶಸ್ತಿ ಪುರಸ್ಕøತ ಶಿಕ್ಷಕ, ಕ್ರೀಡಾಪಟು, ಕಲಾ ಸಾಹಿತಿ, ಮಕ್ಕಳ ಮೇಳದ ಸ್ಥಾಪಕರಲ್ಲೋರ್ವರಾದ ದಿವಂಗತ ಕಾರ್ಕಡ
ಶ್ರೀನಿವಾಸ ಉಡುಪ ಸಂಸ್ಮರಣೆ ಮತ್ತು ಉಡುಪ ಪ್ರಶಸ್ತಿ
ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಖ್ಯಾತ ಭಾಗವತ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ಹತ್ತು ಸಾವಿರ ನಗದು ಮತ್ತು ಪ್ರಶಸ್ತಿ
ಪತ್ರದೊಂದಿಗೆ ಉಡುಪ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಮಕ್ಕಳ ಮೇಳದ ಪ್ರಾಕ್ತನ ಕಲಾವಿದ ಬೆಂಗಳೂರಿನ ಲಿಯೋಸ್
ಇಸ್ರೋನ ನಿವೃತ್ತ ಡೆಪ್ಯುಟಿ ಡೈರೆಕ್ಟರ್ ಎಚ್. ಗಣೇಶ್ ಕಾಮತ್
ಉಡುಪ ಸಂಸ್ಮರಣೆ ಮಾಡಲಿದ್ದಾರೆ.
ಅಂದು ಮುಖ್ಯ ಅಭ್ಯಾಗತರಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬೆಂಗಳೂರಿನ ಮಯ್ಯಾಸ್ ಬೆವೆರೆಜಸ್‍ನ ಡಾ. ಪಿ. ಸದಾನಂದ ಮಯ್ಯ, ಕರ್ನಾಟಕ ಬ್ಯಾಂಕ್‍ನ ಎಂ. ಡಿ. ಮಹಾಬಲೇಶ್ವರ ಭಟ್ ಎಂ. ಎಸ್. ಮಂಗಳೂರು, ಕೆನರಾ ಬ್ಯಾಂಕ್ ಮಹಾ ಪ್ರಬಂಧಕರಾದ ರಾಮ ನಾಯ್ಕ್, ಜನತಾ ಫಿಶ್ ಮಿಲ್ ಮತ್ತು ಆಯಿಲ್ ಪ್ರಾಡಕ್ಟ್ ಮುಖ್ಯಸ್ಥ ಆನಂದ ಸಿ ಕುಂದರ್, ಸಿಂಡಿಕೇಟ್ ಬ್ಯಾಂಕ್‍ನ ನಿವೃತ್ತ ಮಹಾ
ಪ್ರಬಂಧಕರಾದ ಪಿ. ಭಾಸ್ಕರ ಹಂದೆ, ಕಲ್ಕೂರ ಪ್ರತಿಷ್ಠಾನ
ಮಂಗಳೂರಿನ ಪ್ರದೀಪ ಕುಮಾರ ಕಲ್ಕೂರ
ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಮೊದಲು ಸುಬ್ರಹ್ಮಣ್ಯ ಧಾರೇಶ್ವರ
ಮತ್ತು ಬಳಗದವರಿಂದ ಯಕ್ಷ ರಸ ಗಾನ ಸುಧಾ, ಸಭಾ
ಕಾರ್ಯಕ್ರಮದ ಬಳಿಕ ಡಾ.ಶ್ರೀಪಾದ ಭಟ್ ಪರಿಕಲ್ಪನೆಯ,
ಕಾವ್ಯ ಹಂದೆ ಅಭಿನಯದ ಹಕ್ಕಿ ಮತ್ತು ಅವಳು ಏಕವ್ಯಕ್ತಿ
ನಾಟಕ ಪ್ರದರ್ಶನ, ಅತಿಥಿ ಕಲಾವಿದರ ಕೂಡುವಿಕೆಯಲ್ಲಿ
ಗಾಂಗೇಯ ಯಕ್ಷಗಾನ ಪ್ರದರ್ಶನವಿದೆ ಎಂದು ಮಕ್ಕಳ
ಮೇಳದ ಕಾರ್ಯದರ್ಶಿ ಉಪನ್ಯಾಸಕ ಸುಜಯೀಂದ್ರ ಹಂದೆ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.