ಡೈಲಿ ವಾರ್ತೆ:19 ಜನವರಿ 2023

ಜ. 22ರಂದು ಕುಂದಾಪುರದ ಮೊಗವೀರ ಭವನ ಉದ್ಘಾಟನೆ

ಕುಂದಾಪುರ: ಇಲ್ಲಿನ ಚಿಕ್ಕನ್‌ ಸಾಲ್ ರಸ್ತೆ ಬದಿಯಲ್ಲಿ 10 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ 60 ಸಾವಿರ ಚ.ಅಡಿಯ ಸಂಪೂರ್ಣ 3 ಮಹಡಿಗಳ ಹವಾನಿಯಂತ್ರಿತ ಮೊಗವೀರ ಭವನದ ಉದ್ಘಾಟನೆ ಜ. 22ರಂದು ನಡೆಯಲಿದೆ ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ. ಜಿ. ಶಂಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಳ ಅಂತಸ್ತು ಹಾಗೂ ಪ್ರಥಮ ಮಹಡಿಯನ್ನು 160ಕ್ಕೂ ಅಧಿಕ ಕಾರು ನಿಲ್ಲಿಸುವಷ್ಟು ಪಾರ್ಕಿಂಗ್‌ಗೆ ಮೀಸಲಿರಿಸಲಾಗಿದೆ. ಇದಲ್ಲದೇ ವಾಹನಗಳ ಪಾರ್ಕಿಂಗ್‌ಗಾಗಿಯೇ 28 ಸೆಂಟ್ಸ್ ಪ್ರತ್ಯೇಕ ಜಾಗ ಖರೀದಿಸಲಾಗಿದೆ. ಕುಂದಾಪುರದ ವಿಶಾಲ ಪಾರ್ಕಿಂಗ್ ವ್ಯವಸ್ಥೆಯ ಸುಸಜ್ಜಿತ ಹಾಲ್ ಆಗಿ ಮೂಡಿಬಂದಿದೆ ಎಂದರು.

ಮೊಗವೀರ ಭವನದ ವಿಶೇಷತೆಗಳು:
“ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ”
“ಎರಡು ಲಿಫ್ಟ್ ವ್ಯವಸ್ಥೆ”
“850 ಜನ ಸಾಮಾರ್ಥ್ಯದ ಸಭಾಂಗಣ”
“450 ಜನ ಸಾಮಾರ್ಥ್ಯದ ಭೋಜನಾಲಯ”
“ಬಫೆಗೆ ಪ್ರತ್ಯೇಕ ಕೌಂಟರ್”
“ಸಸ್ಯಹಾರಿ ಮಾಂಸಹಾರಿಗೆ ಪ್ರತ್ಯೇಕ ಅಡುಗೆಮನೆ”
“ಮಿನಿಹಾಲ್ ಸೌಲಭ್ಯ” ಇದರ ಉದ್ಘಾಟನೆಯನ್ನು
ಜ. 22ರಂದು ಡಾ. ಜಿ. ಶಂಕರ್ ಅಧ್ಯಕ್ಷತೆಯಲ್ಲಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಮೊಗವೀರ ಭವನವನ್ನು ಎಸ್. ಅಂಗಾರ, ವಿ. ಸುನಿಲ್‌ ಕುಮಾರ್, ಸಂಸದ ಬಿ.ವೈ. ರಾಘವೇಂದ್ರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಂ. ಸುಕುಮಾರ ಶೆಟ್ಟಿ ಮತ್ತು ಮೊಗವೀರ ಮಹಾಜನ ಬಗ್ವಾಡಿ ಹೋಬಳಿ ಗೌರವಾಧ್ಯಕ್ಷ ಸುರೇಶ್‌ ಆರ್‌. ಕಾಂಚನ್ ವಿವಿಧ ವಿಭಾಗಗಳನ್ನು ಉದ್ಘಾಟಿಸಲಿದ್ದಾರೆ.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ವರ್ಷದ ಸಾಮೂಹಿಕ ವಿವಾಹ ಇದೇ ಹಾಲ್‌ನಲ್ಲಿ ನಡೆಯಲಿದೆ. ಇಲ್ಲಿ ಬಂದ ಆದಾಯವನ್ನು ಬಡ ಮಕ್ಕಳ ಶಿಕ್ಷಣ, ಆರೋಗ್ಯಕ್ಕೆ ವಿನಿಯೋಗಿಸಲಾಗುವುದು ಎಂದರು. ಬೆಣ್ಣೆಕುದ್ರು ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಆನಂದ್ ಸಿ. ಕುಂದರ್, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಗೌರವಾಧ್ಯಕ್ಷ ಸುರೇಶ್‌ ಆರ್. ಕಾಂಚನ್‌, ಶಾಖಾಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ಮಾಜಿ ಅಧ್ಯಕ್ಷರಾದ ಕೆ.ಕೆ. ಕಾಂಚನ್, ಎಂ.ಎನ್. ಸುವರ್ಣ, ಶಾಖಾ ಕಾರ್ಯದರ್ಶಿ ಪ್ರಭಾಕರ ಎನ್. ಮೊಗವೀರ ಇದ್ದರು.