

ಡೈಲಿವಾರ್ತೆ:15/ಮಾರ್ಚ್/2026


ಸಾಸ್ತಾನ: ಕೆಳಬೆಟ್ಟು ಕಳಿಬೈಲ್ ಕ್ಷೇತ್ರದಲ್ಲಿ ಮಾರ್ಚ್ 22 ರಿಂದ 29 ರವರೆಗೆ ‘ನೇಮೋತ್ಸವ – 2026’

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಸ್ತಾನ ಸಮೀಪದ ಕೆಳಬೆಟ್ಟು (ಮೂಡಹಡು ಗ್ರಾಮ) ಶ್ರೀ ಕ್ಷೇತ್ರದಲ್ಲಿ ನೆಲೆನಿಂತು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವ ಶಕ್ತಿಗಳಾದ ಶ್ರೀ ತುಳಸಿ ಅಮ್ಮ, ಶ್ರೀ ಶಿರಸಿ ಮಾರಿಕಾಂಬೆ, ಕಾರಣಿಕ ದೈವ ಪಂಜುರ್ಲಿ ಹಾಗೂ ಕಳಿಬೈಲ್ ಸ್ವಾಮಿ ಕೊರಗಜ್ಜ ಮತ್ತು ಸಪರಿವಾರ ದೈವಗಳ ‘ಕಳಿಬೈಲ್ ನೇಮೋತ್ಸವ – 2026’ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಮಾರ್ಚ್ 22 ರಿಂದ ಮಾರ್ಚ್ 29 ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿವೆ.
ಅನಾದಿ ಕಾಲದ ಇತಿಹಾಸವಿರುವ ಈ ಪುಣ್ಯ ಸಾನಿಧ್ಯದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ವೈವಿಧ್ಯಮಯ ಪೂಜಾ ವಿಧಿವಿಧಾನಗಳು ನಡೆಯಲಿವೆ ಎಂದು ಕ್ಷೇತ್ರದ ಪ್ರಧಾನ ಅರ್ಚಕರು ಹಾಗೂ ಸಂಚಾಲಕರಾದ ಶ್ರೀ ಅಭಿಜಿತ್ ಪಾಂಡೇಶ್ವರ ಮತ್ತು ಕಳಿಬೈಲು ಆಡಳಿತ ಮುಕ್ತೇಸರರಾದ ಶ್ರೀ ಎಂ.ಸಿ. ಚಂದ್ರಶೇಖರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ವಿವರಗಳು:
ಮಾರ್ಚ್ 22, 2026 (ಭಾನುವಾರ): ಸಾಮೂಹಿಕ ಚಂಡಿಕಾಯಾಗ
ಬೆಳಿಗ್ಗೆ 9:30ಕ್ಕೆ: ಶ್ರೀ ವೇದಮೂರ್ತಿ ರಮೇಶ್ ಭಟ್ ಅವರ ನೇತೃತ್ವದಲ್ಲಿ ಸಾಮೂಹಿಕ ಚಂಡಿಕಾಯಾಗ ಹಾಗೂ ಧಾರ್ಮಿಕ ಪೂಜಾ ಕಾರ್ಯಕ್ರಮಗಳು.
ಮಧ್ಯಾಹ್ನ 1:30ಕ್ಕೆ: ಮಹಾ ಅನ್ನಸಂತರ್ಪಣೆ.
ಮಾರ್ಚ್ 28, 2026 (ಶನಿವಾರ): ಗೆಂಡೋತ್ಸವ ಹಾಗೂ ಕಳಿಬೈಲ್ ನೇಮೋತ್ಸವ
ಬೆಳಿಗ್ಗೆ 6:00ಕ್ಕೆ: ಪ್ರಸನ್ನ ಪೂಜೆ.
ಬೆಳಿಗ್ಗೆ 10:00ಕ್ಕೆ: ನೇಮೋತ್ಸವದ ಚಪ್ಪರ ಮುಹೂರ್ತ.
ಮಧ್ಯಾಹ್ನ 12:30ಕ್ಕೆ: ಮಧ್ಯಾಹ್ನ ಪೂಜೆ, ಪ್ರಸಾದ ವಿತರಣೆ ಮತ್ತು ಮಹಾ ಅನ್ನಸಂತರ್ಪಣೆ.
ಮಧ್ಯಾಹ್ನ 3:00ಕ್ಕೆ: ಭಂಡಾರ ಇಳಿಯುವುದು ಹಾಗೂ ಶ್ರೀ ಪಂಜುರ್ಲಿ ದೈವದ ದರ್ಶನ ಸೇವೆ.
ರಾತ್ರಿ 7:30ಕ್ಕೆ: ಭಕ್ತಿಪೂರ್ವಕ ಗೆಂಡೋತ್ಸವ ಕಾರ್ಯಕ್ರಮ.
ಮಾರ್ಚ್ 29, 2026 (ಭಾನುವಾರ): ವಾರ್ಷಿಕ ಮಾರಿ ಪೂಜೆ ಹಾಗೂ ದರ್ಶನ ಸೇವೆ
ಬೆಳಿಗ್ಗೆ 10:30ಕ್ಕೆ: ಶ್ರೀ ಪಂಜುರ್ಲಿ ದೈವದ ದರ್ಶನ ಹಾಗೂ ಪೂಜೆ.
ಮಧ್ಯಾಹ್ನ 2:00ಕ್ಕೆ: ಶ್ರೀ ತುಳಸಿ ಅಮ್ಮ, ಶ್ರೀ ಮಳಿಯಾಳಿ ಭಂಗಿ ಅಜ್ಜ ಹಾಗೂ ಶ್ರೀ ಹುಲಿದುರ್ಗಿ ಅಮ್ಮನ ದರ್ಶನ ಸೇವೆ.
ಸಂಜೆ 5:00ರಿಂದ: ಶ್ರೀ ಶಿರಸಿ ಮಾರಿಕಾಂಬೆ ದರ್ಶನ ಸೇವೆ, ಕುರಿ-ಕೋಳಿ ತಂಬಿಲ ಸೇವೆ ಹಾಗೂ ಮಾರಿ ಪೂಜೆ.
ರಾತ್ರಿ 9:00ಕ್ಕೆ: ಸ್ವಾಮಿ ಕೊರಗಜ್ಜನ ದರ್ಶನ ಸೇವೆ, ಮಹಾ ಅನ್ನಸಂತರ್ಪಣೆ ಮತ್ತು ಪ್ರಸಾದ ವಿತರಣೆ.
ಈ ಸಮಸ್ತ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಶ್ರೀ ದೈವ-ದೇವರುಗಳ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಕಳಿಬೈಲು ಸ್ವಾಮಿ ಕೊರಗಜ್ಜ ಸೇವಾ ಸಮಿತಿಯವರು ವಿನಂತಿಸಿದ್ದಾರೆ.