ಡೈಲಿ ವಾರ್ತೆ:19 ಜನವರಿ 2023
ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್ಸ್ ವತಿಯಿಂದ ಸಂಪೂರ್ಣ ಉಚಿತ ವೈದ್ಯಕೀಯ ಶಿಬಿರ
ಉಡುಪಿ : ಸೀನಿಯರ್ ಸಿಟಿಜನ್ಸ್ ಅಸೋಸಿಯೇಶನ್ (ರಿ), ಉಡುಪಿ ನವೋದಯ ಸ್ವಸಹಾಯ ಸಂಘಗಳು ಉಡುಪಿ, ಉಡುಪಿ ಜಿಲ್ಲಾ ಆಟೋರಿಕ್ಷಾ ಚಾಲಕ ಮತ್ತು ಮಾಲಕರ ಸಂಘಗಳ ಒಕ್ಕೂಟ ಉಡುಪಿ, ಉಡುಪಿ ಜಿಲ್ಲೆಯ ಎಲ್ಲಾ ರಿಕ್ಷಾ ಚಾಲಕರು, ಮಾಲಕರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಜನಮಿತ್ರ ಗ್ರಾಮ ಒನ್ ತೆಂಕನಿಡಿಯೂರು ಮತ್ತು ಆದಿ ಉಡುಪಿ ಮತ್ತು ಸೀನಿಯರ್ ಜೇಸಿ ಉಡುಪಿ ಛೇಂಬರ್ ಸಿಟಿ ಲೀಜನ್ ಇವರ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರವು ದಿನಾಂಕ 22-01-2023ನೇ ಭಾನುವಾರ ಬೆಳಿಗ್ಗೆ ಗಂಟೆ 9.00ರಿಂದ ಮಧ್ಯಾಹ್ನ ಗಂಟೆ 1.00ರ ವರೆಗೆ ಸ್ಥಳ : ಮೆಡಿಕೇರ್ ಸೆಂಟರ್, ಪೈ ಸೇಲ್ಸ್ ಹಿಂಬದಿ, ಕೋರ್ಟ್ ಬದಿಯ ರಸ್ತೆ, ಹೋಟೆಲ್ ಉಷಾ ಎದುರುಗಡೆ, ಉಡುಪಿಯಲ್ಲಿ ನಡೆಯಲಿರುವುದು.
ಭಾಗವಹಿಸುವ ತಜ್ಞ ವೈದ್ಯರುಗಳು :ಮೆಡಿಕಲ್ ಸೆಂಟರ್ ವೈದ್ಯಕೀಯ ತಜ್ಞರಾದ ಡಾ. ಭಾಸ್ಕರ್ ಎ. ಪಾಲನ್
ಮೆಡಿಕಲ್ ಸೆಂಟರ್ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು
ಡಾ. ರಂಜಿತಾ ಎಸ್. ನಾಯಕ್, ಮೆಡಿಕಲ್ ಸೆಂಟರ್ ಚರ್ಮ ರೋಗ ತಜ್ಞರು ಡಾ. ಅರುಣ್ ಶೆಟ್ಟಿ ಕೆ., ಮೆಡಿಕಲ್ ಸೆಂಟರ್ ಮನೋರೋಗ ತಜ್ಞರು ಡಾ. ರಿತಿಕಾ ಸಾಲ್ಯಾನ್, ಡಾ. ದೀಪಾ ನಾಯಕ್ ಇವರು ಭಾಗವಹಿಸಲಿದ್ದಾರೆ.
ಉಚಿತ ಸೌಲಭ್ಯಗಳು
1. ಎಲ್ಲಾ ವೈದ್ಯರ ತಪಾಸಣೆಗಳು ಮತ್ತು ಸಲಹೆಗಳು
2. ಇಸಿಜಿ (ವೈದ್ಯರ ಸಲಹೆ ಮೇರೆಗೆ)
3. ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ
4. ಔಷಧಿಗಳು
5. ರಕ್ತ ಮತ್ತು ಮೂತ್ರ ಪರೀಕ್ಷೆ
(ಸುಮಾರು -800/- ಬೆಲೆ ಬಾಳುವ ಪ್ಯಾಕೇಜ್)
6. ಉಚಿತ ಫಿಸಿಯೋಥೆರಾಪಿ ಸಲಹೆಗಳು
(ವಿ.ಸೂ.: ಬರೀ ಹೊಟ್ಟೆಯಲ್ಲಿ ರಕ್ತ ತಪಾಸಣೆ ಮಾಡುವವರು ಬೆಳಿಗ್ಗೆ ಗಂಟೆ 6.30ರ ನಂತರ ಬಂದು ರಕ್ತ ಕೊಡಬಹುದು ಆ ನಂತರ ಶಿಬಿರದಲ್ಲಿ ಬಂದು ವೈದ್ಯರಿಗೆ ರಿಪೋರ್ಟ್ ತೋರಿಸಬಹುದು.
ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ರವೀಂದ್ರ ಶೆಟ್ಟಿ . ಸಿ ಎಂ ಡಿ ಗಿರಿಜಾ ಗ್ರೂಫ್ ಆಪ್ ಕಾನ್ಸೆರ್ನ್ಸ್ ಉಡುಪಿ ಇವರು ವಿನಂತಿಸಿದ್ದಾರೆ.