



ಡೈಲಿ ವಾರ್ತೆ:24 ಜನವರಿ 2023


ಆರ್ ಎನ್ ಶೆಟ್ಟಿ ಸಭಾಂಗಣ ದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ, ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆಯ ಪೂರ್ವಭಾವಿ ಸಭೆ

ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ, ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆಯ ಪೂರ್ವಭಾವಿ ಸಭೆಯು ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ಜ. 23 ರಂದು ಸೋಮವಾರ ನಡೆಯಿತು. ಸಭೆಯಲ್ಲಿ NSUI ಬಲಪಡಿಸುವ ಬಗ್ಗೆ, ವಿದ್ಯಾರ್ಥಿಗಳ ನಾಯಕತ್ವ, ಶೈಕ್ಷಣಿಕ ವರ್ಷದಲ್ಲಿ ಇರುವಂತ ಸವಾಲುಗಳು, ಬಗ್ಗೆ ಚರ್ಚಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿ ಪ್ರಸಾದ್ ಶೆಟ್ಟಿ, NSUI ಜಿಲ್ಲಾಧ್ಯಕ್ಷ ಸೌರವ್ ಬಲ್ಲಾಳ್, ವಿಧಾನಸಭಾ ಚುನಾವಣಾ ಆಕಾಂಕ್ಷಿ ಮೊಳಹಳ್ಳಿ ದಿನೇಶ್ ಹೆಗ್ಡೆ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ, ಯುವ ಕಾಂಗ್ರೆಸ್ ಅಧ್ಯಕ್ಷ ಇಶ್ಚಿತಾರ್ಥ ಶೆಟ್ಟಿ ಮಾತನಾಡಿದರು.
ಸಭೆಯಲ್ಲಿ ಕಾಂಗ್ರೆಸ್ ಐ.ಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಯುವಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಜಿತ್ ಶೆಟ್ಟಿ, NSUI ಜಿಲ್ಲಾ ಉಪಾಧ್ಯಕ್ಷ ಶರತ್ ಕುಂದರ್, ಸೋಶಿಯಲ್ ಮೀಡಿಯಾ ಜಿಲ್ಲಾಧ್ಯಕ್ಷ ರೋಷನ್ ಶೆಟ್ಟಿ, ಭಂಡಾಕಾರ್ಸ್ ಕಾಲೇಜಿನ ಎನ್‌ಎಸ್‌ಯುಐ ಘಟಕದ ಅಧ್ಯಕ್ಷ ಸುಮುಖ್ ಶೇರೆಗಾರ್, ಉಪಾಧ್ಯಕ್ಷ ವಿವೇಕ್ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ವಿವಿಧ ಕಾಲೇಜು ಗಳ ಎನ್‌ಎಸ್‌ಯುಐ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ನಡೆಯಿತು.
NSUI ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸುಜನ್ ಶೆಟ್ಟಿ ಸರ್ವರನ್ನು ಸ್ವಾಗತಿಸಿ, ಯುವ ಮುಖಂಡರಾದ ಸುನಿಲ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿ , ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಮುನಾಫ್ ಕೋಡಿ ವಂದಿಸಿದರು.