ಡೈಲಿ ವಾರ್ತೆ:24 ಜನವರಿ 2023
ವಿಮಾನದಲ್ಲಿ ಗಗನಸಖಿಯ ಅಂಗಾಂಗ ಸ್ಪರ್ಶಿಸಿದ ಪ್ರಯಾಣಿಕನ ಬಂಧನ
ನವದೆಹಲಿ: ಮಹಿಳಾ ಸಿಬ್ಬಂದಿಯ ಅಂಗಾಂಗ ಸ್ಪರ್ಶಿಸಿ ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಪ್ರಯಾಣಿಕರೊಬ್ಬರನ್ನು ಸ್ಪೈಸ್’ಜೆಟ್ ವಿಮಾನಯಾನ ಸಂಸ್ಥೆಯು ಕೆಳಗಿಳಿಸಿದ್ದು, ಪೊಲೀಸರು ಅವರನ್ನು ಬಂಧಿಸಿದ್ದಾರೆ.
ದೆಹಲಿ- ಹೈದರಾಬಾದ್ ಮಾರ್ಗದ ಎಸ್ ಜಿ-8133 ವಿಮಾನದಲ್ಲಿ ನಿನ್ನೆ ಘಟನೆ ನಡೆದ ಘಟನೆ ಸಂಬಂಧಿಸಿದಂತೆ ಸ್ಪೈಸ್ ಜೆಟ್ ಭದ್ರತಾ ಅಧಿಕಾರಿಯಿಂದ ದೂರು ಸ್ವೀಕರಿಸಿ ಪ್ರಯಾಣಿಕ ಅಬ್ಸರ್ ಆಲಂ ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಪ್ರಯಾಣಿಕನ ವಿರುದ್ಧ ಸೆಕ್ಷನ್ 354A ಅಡಿಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಪೈಸ್ ಜೆಟ್’ನಲ್ಲಿ ಪ್ರಯಾಣಿಕರಿಬ್ಬರು ಅಶಿಸ್ತಿನ ವರ್ತನೆ ತೋರಿದ ನಂತರ ಅವರನ್ನು ವಿಮಾನದಿಂದ ಕೆಳಗಿಳಿಸಲಾಯಿತು. ಈ ವೀಡಿಯೋ ಸದ್ಯ ಜಾಲತಾಣದಲ್ಲಿ ಹರಿದಾಡುತ್ತಿದೆ. ವೀಡಿಯೋದಲ್ಲಿ ಪ್ರಯಾಣಿಕರು ಕ್ಯಾಬಿನ್ ಸಿಬ್ಬಂದಿಯ ಮೇಲೆ ಕೂಗಾಡುತ್ತಿರುವುದನ್ನು ಕಾಣಬಹುದು.