



ಡೈಲಿ ವಾರ್ತೆ:24 ಜನವರಿ 2023


ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಬ್ರಹ್ಮಾವರ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಆಸಿಫ್ ಆಯ್ಕೆ
ಬ್ರಹ್ಮಾವರ: ದಿನಾಂಕ 23 ರಂದು ಉಪ್ಪಿನಕೋಟೆ ಜಾಮಿಯಾ ಮಸೀದಿಯಲ್ಲಿ ನಡೆದ ತಾಲೂಕು ಸಮಿತಿ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಆಸಿಫ್ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಆಮೀರ್ ಬಾಷಾ, ಉಪಾಧ್ಯಕ್ಷರಾಗಿ ಎಚ್.ಎ.ರಹಮಾನ್, ಜೊತೆ ಕಾರ್ಯದರ್ಶಿಯಾಗಿ ಜಮಾಲ್ ಹೈದರ್, ಖಜಾಂಚಿಯಾಗಿ ಅಸ್ಲಮ್ ಹೈಕಾಡಿ ಆಯ್ಕೆಯಾದರು. ಸಹಕರಣದ ಮೂಲಕ 5 ಮಂದಿ ಹೊಸ ಸದಸ್ಯರನ್ನು ನಾಮನಿರ್ದೇಶನಗೊಂಡರು. ನಿರ್ಗಮನ ಅಧ್ಯಕ್ಷರಾದ ಜಮಾಲುದ್ದೀನ್ ರವರು ಅಧಿಕಾರ ಹಸ್ತಾಂತರಿಸಿದರು. ಒಕ್ಕೂಟದ ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಸಾಹೇಬ್ ಕೋಟಾ ಹಿತವಚನ ನುಡಿದರು. ಪ್ರದಾನ ಕಾರ್ಯದರ್ಶಿಯಾದ ಇದ್ರೀಸ್ ಹೂಡೆ ಅಧ್ಯಕ್ಷೀಯ ಚುನಾವಣೆಯನ್ನು ನಡೆಸಿಕೊಟ್ಟರು. ಉಪಾಧ್ಯಕ್ಷರಾದ ಸಲಾಹುದ್ದೀನ್ ಅಬ್ದುಲ್ಲಾಹ್, ಜೊತೆ ಕಾರ್ಯದರ್ಶಿ ಅಬ್ದುಲ್ ರಝಾಕ್, ಕೇಂದ್ರ ಸಮಿತಿ ಸದಸ್ಯ ಯಾಸೀನ್ ಕೋಡಿಬೇಂಗ್ರೆ ಉಪಸ್ಥಿತರಿದ್ದರು.