ಡೈಲಿ ವಾರ್ತೆ:24 ಜನವರಿ 2023

ವರದಿ ಆಕಾಶ್ ಚಲವಾದಿ ಬೆಂಗಳೂರು 9008827439

ಚಿತ್ರನಟಿ ರಚಿತಾ ರಾಮ್ ರವರು ಗಣರಾಜ್ಯೋತ್ಸವದ ಬಗ್ಗೆ ದೇಶದ್ರೋಹಿ ಹೇಳಿಕೆ: ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ಕೋರಿ ಕನ್ನಡ ಚಲನಚಿತ್ರ ವಾಣಿ ಮಂಡಳಿ ಅಧ್ಯಕ್ಷರಿಗೆ ಮನವಿ.

ಬೆಂಗಳೂರು :ಚಿತ್ರನಟಿ ರಚಿತಾ ರಾಮ್ ರವರು ಗಣರಾಜ್ಯೋತ್ಸವದ ಬಗ್ಗೆ ದೇಶದ್ರೋಹಿ ಹೇಳಿಕೆ ನೀಡಿರುವ ಕುರಿತಂತೆ ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ಕೋರಿ ಮನವಿ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರ ನಟಿ ಕುಮಾರಿ ರಚಿತಾ ರಾಮ್ ರವರು ದಿನಾಂಕ 07.01.2023 ರಂದು ಒರಿಯನ್ ಮಾಲ್ ನಲ್ಲಿ ನಡೆದ ಕ್ರಾಂತಿ ಸಿನಿಮಾ ಟೇಸರ್ ಬಿಡುಗಡೆ ಸಮಾರಂಭದಲ್ಲಿ ಬಹಿರಂಗವಾಗಿ ಗಣರಾಜ್ಯೋತ್ಸವದ ಬಗ್ಗೆ ದೇಶದ್ರೋಹಿ ಹೇಳಿಕೆಯನ್ನು ನೀಡಿರುತ್ತಾರೆ ಅವರ ಹೇಳಿಕೆ ಹೀಗೆ ಹೀಗಿದೆ. ಜನವರಿ 26( Republic Day) ಬದಲಿಗೆ ಈ ವರ್ಷ ನಾವು ಗಣರಾಜ್ಯೋತ್ಸವವನ್ನು ಮರೆತು ಕ್ರಾಂತಿ ಉತ್ಸವ ಮಾಡೋಣ ಎಂದು ವಿರುದ್ಧವಾಗಿ ಆ ಸಮಾವೇಶದಲ್ಲಿ ಹೇಳಿದರು.(ಐಪಿಸಿ 124A) ಜವಾಬ್ದಾರಿಯುತ ದೇಶಪ್ರೇಮಿಗಳಿಗೆ ಸಂವಿಧಾನದ ಆರಾಧಕರಿಗೆ ತುಂಬಾ ಬೇಸರವಾಗಿದೆ.


ಕೇವಲ ಒಂದು ಸಿನಿಮಾದ ಪ್ರಚಾರಕ್ಕೆ ಗಣರಾಜ್ಯೋತ್ಸವವನ್ನು ಮರೆತು ಬಿಡೋಣ ಎಂದು ರಚಿತರಾಮ (ನಟಿ )ರವರು ಹೇಳಿದರು ಈ ವಿಚಾರಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೇಳುವಂತೆ ಕೇಳಿಕೊಂಡರು ಇದ್ಯಾವುದಕ್ಕೂ ಮನ್ನಣೆ ನೀಡದೆ ಏನನ್ನು ಪ್ರತಿಕ್ರಿಯಿಸದೆ ಮತ್ತಷ್ಟ ಬೇಜವಾಬ್ದಾರಿಯಿಂದ ಸುಮ್ಮನಿರುವುದು ನಮಗೆ ಮತ್ತಷ್ಟು ನೋವುಂಟು ಮಾಡಿದೆ. ಅವರು ಕ್ಷಮೆ ಕೇಳಿದ್ದರೆ ನಾವು ಮುಂದುವರೆಯುತ್ತಿರಲಿಲ್ಲ. ಬದಲಾಗಿ ಇವರು ನಿರ್ಲಕ್ಷೆಗೆ ನಮ್ಮ ಧಿಕ್ಕಾರವಿರಲಿ ಹಾಗಾಗಿ ಕಾನೂನಿನ ಅಡಿಯಲ್ಲಿ ಈ ವಿಷಯವಾಗಿ ಬೇರೆ ಬೇರೆ ಸ್ಥಳಗಳಲ್ಲಿ ಪೊಲೀಸ್ ಠಾಣೆಗೆ ದೂರು ನೀಡಲಾಯಿತು.