



ಡೈಲಿ ವಾರ್ತೆ: 27 ಜನವರಿ 2023


ಬಹು ಭಾಷಾ ಹಿರಿಯ ನಟಿ ಜಮುನಾ ಇನ್ನಿಲ್ಲ
ಹೈದರಾಬಾದ್: ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷೆಗಳ ಸಿನೆಮಾದಲ್ಲಿ ಅಭಿನಯಿಸಿದ್ದ ಹಿರಿಯ ನಟಿ ಜಮುನಾ (86) ಇನ್ನಿಲ್ಲ. ಕಳೆದ ಕೆಲವು ತಿಂಗಳಿನಿಂದ ವಯೋ ಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು.
16 ನೇ ವರ್ಷದಲ್ಲಿ ಪುಟ್ಟಿಲು ಸಿನೆಮಾದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. 1955ರಲ್ಲಿ ತೆರೆ ಕಂಡ ಮಿಸಮ್ಮ ಚಿತ್ರ ಅವರಿಗೆ ದೊಡ್ಡ ಬ್ರೇಕ್ ನೀಡಿತ್ತು.
ತೆನಾಲಿ ರಾಮಕೃಷ್ಣ, ಗುಂಡಮ್ಮ ಕಥಾ, ರಾಮುಡು ಭೀಮುಡು ಸೇರಿದಂತೆ ಹಲವು ಪ್ರಸಿದ್ಧ ಸಿನೆಮಾಗಳಲ್ಲಿ ನಟಿಸಿದ್ದರು. ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದರು. 9ನೇ ಲೋಕಸಭೆಗೆ ರಾಜಮಂಡ್ರಿಯಿಂದ ಚುನಾಯಿತರಾಗಿದ್ದರು.
ಕನ್ನಡದಲ್ಲಿ ಸಾಕ್ಷಾತ್ಕಾರ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.