ಡೈಲಿ ವಾರ್ತೆ: 27 ಜನವರಿ 2023

ಕೋಟ: ಯಕ್ಷಗಾನದಲ್ಲಿ ಕ್ಷೌರಿಕರ ಅವಹೇಳನ – ಸವಿತಾ ಸಮಾಜ ಖಂಡನೆ (ವಿಡಿಯೋ ವೀಕ್ಷಿಸಿ)

ಕೋಟ : ಯಕ್ಷಗಾನದಲ್ಲಿ ಕ್ಷೌರಿಕ ವೃತ್ತಿ ಹಾಗೂ ಜಾತಿಯನ್ನು ಹೀನಾಯವಾಗಿ ಅಪಹಾಸ್ಯ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಸವಿತಾ ಸಮಾಜ ಖಂಡಿಸಿದೆ.

ತೆಕ್ಕಟ್ಟೆಯ ಮಲ್ಯಾಡಿಯಲ್ಲಿ ಜ.23 ರಂದು ನಡೆದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನದಲ್ಲಿ ಓರ್ವ ಕಲಾವಿದ ಕ್ಷೌರಿಕ ವೃತ್ತಿ ಹಾಗೂ ಜಾತಿಯನ್ನು ಹೀನಾಯವಾಗಿ ಅಪಹಾಸ್ಯ ಮಾಡಲಾಗಿದೆ.
ಇದನ್ನು ಖಂಡಿಸಿರುವ ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ವಿಶ್ವನಾಥ ಭಂಡಾರಿ ನಿಂಜೂರು ಹಾಗೂ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಕುಲಕಸುಬಾದ ಕ್ಷೌರಿಕ ವ್ಯಕ್ತಿವಿಮುಖವಾಗುವ ಸಂದರ್ಭದಲ್ಲಿ ಈ ನಮ್ಮ ವೃತ್ತಿಪರ ಸಂಘಟಣೆಯಾದ ಸವಿತ ಸಮಾಜ ಮುಖಾಂತರ ಈ ವೃತ್ತಿಗೆ ಒಂದು ಬೆಲೆ ಗೌರವ ಸಿಗುವ ಸಂದರ್ಭದಲ್ಲಿ ಇಂತಹ ಪ್ರಸಿದ್ಧ ಭಕ್ತಿಪ್ರಧಾನ ಕ್ಷೇತ್ರದ ಹೆಸರಲ್ಲಿ ನಡೆಸುವ ಮೇಳದಲ್ಲಿ ಈ ರೀತಿ ಕಲಾವಿದನಿಂದ ಅಪಹಾಸ್ಯ ಮಾಡಿ ವೃತ್ತಿಗೆ, ಕುಲಕ್ಕೆ ವಿಶೇಷವಾಗಿ ಈ ಯಕ್ಷಗಾನದ ಹಾಗೂ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರಲಾಗಿದೆ. ಈ ರೀತಿ ಮುಜುಗರ ಮಾಡುವ ಕಲಾವಿದನನ್ನು ಮೇಳದಿಂದ ಉಚ್ಚಾಟಿಸಬೇಕೆಂದು ಆಗ್ರಹಿಸಿದ್ದಾರೆ.