



ಡೈಲಿ ವಾರ್ತೆ:14 ಫೆಬ್ರವರಿ 2023


ವರದಿ. ಮಲ್ಲಿಕಾಜು೯ನ ಅಲ್ಲಾಪೂರ ಸಿಂದಗಿ
ಸಿಂದಗಿ: ನೂತನ ದ್ವಿಚಕ್ರ ವಾಹನ ಬಿಡುಗಡೆಗೊಳಿಸಿದ ಅಶೋಕ ಮನಗೂಳಿ
ಸಿಂದಗಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಜೋಗುರ ಸಂಸ್ಥೆಯು ಇಂದು ನೂತನ HERO XOOM ದ್ವಿಚಕ್ರ ವಾಹನ ಬಿಡುಗಡೆ ಮಾಡಿತ್ತು.
ಸಿಂದಗಿ ತಾಲೂಕಿನಲ್ಲಿ ಮಾತ್ರ ವಲ್ಲದೆ ವಿಜಯಪುರ ಜಿಲ್ಲೆಯಲ್ಲಿ ಅತಿ ಹೇಚ್ಚು ವಾಹನ ಮಾರಾಟ ಮಾಡಿದ ಮಳಿಗೆಯಾಗಿದೆ. ಜೋಗುರ ಸಂಸ್ಥೆಯು ಇಷ್ಟೋಂದು ಎತ್ತರಕ್ಕೆ ಬೆಳೆಯಲು ಅವರು ಶ್ರಮ ಹಾಗೂ ಶ್ರದ್ಧೆಯೆ ಕಾರಣ.ಇಂತಹ ಸಂಸ್ಥೆಗಳು ಎಷ್ಟು ಬೆಳೆಯುತ್ತವೆಯೋ ಅಷ್ಟೇ ಕುಟುಂಬಗಳು ಸದೃಢವಾಗಿ ನಿರುದ್ಯೋಗದಿಂದ ಮುಕ್ತ ವಾಗುತ್ತದೆ ಎಂದು ಅಶೋಕ ಮನಗೂಳಿ ಶುಭ ಹಾರೈಸಿದರು.
ಪ್ರತಿ ವರ್ಷ ಒಂದು ವಾಹನಗಳು ಬಿಡುಗಡೆ ಮಾಡುವುದು ಹೀರೊ ಕಂಪನಿಯ ಶ್ರೇಯವಾಗಿದೆ ಹಿಂದಿನ ವಾಹನಗಳಿಗೆ ಇಂದಿನ ಟೆಕ್ನಾಲಜಿ ಸೇರಿಸಿ ನೂತನ ವಾಹನ HERO XOOM ಬಿಡುಗಡೆ ಮಾಡುತ್ತಿರುವುದು ಸಂತಸ ತಂದಿದೆ ಅವರಿಗೆ ಶುಭವಾಗಲಿ ಎಂದು ರಾಜಶೇಖರ ಕೂಚಬಾಳ ಶುಭ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಲೀಕರಾದ ಉಮೇಶ್ ಜೋಗುರ, ರಮೇಶ ಜೋಗುರ, ರಮೇಶ ಹೂಗಾರ, ಮುತ್ತು ಮುಂಡೇವಾಡಗಿ, ಚನ್ನು ಪಟ್ಟಣಶೇಟ್ಟಿ, ಉಪಸ್ಥಿತರಿದ್ದರು ಸಿದ್ದಲಿಂಗ ಕಿಣಗಿ ನಿರೂಪಿಸಿದರು.