


ಡೈಲಿ ವಾರ್ತೆ:05 ಮಾರ್ಚ್ 2023


20 ವರ್ಷಗಳಿಂದ ಕೊರಗಜ್ಜನ ಆರಾಧಕರಾಗಿದ್ದ ಖಾಸಿಂ ಸಾಹೇಬ್ ನಿಧನ
ಉಡುಪಿ: ಕಳೆದ 20 ವರ್ಷಗಳಿಂದ ಕೊರಗಜ್ಜನ ಆರಾಧಕರಾಗಿ ಗುರುತಿಸಿಕೊಂಡಿದ್ದ ಖಾಸಿಂ ಸಾಹೇಬ್ ಹೃದಯಾಘಾತದಿಂದಾಗಿ ನಿಧನರಾಗಿದ್ದಾರೆ.
65 ವರ್ಷದ ಖಾಸಿಂ ಅವರು ಮೂಲತಃ ಕೇರಳದ ಪಾಲಕ್ಕಾಡ್ ಜಿಲ್ಲೆಯವರಾಗಿದ್ದು ಈವರೆಗೆ ಮಂಗಳೂರು ಹೊರವಲಯದ ಮುಲ್ಕಿ ಬಳ್ಕುಂಜೆಯಲ್ಲಿ ನೆಲೆಸಿದ್ದರು.
ಖಾಸಿಂ ಅವರು ಕೇರಳದಿಂದ 35 ವರ್ಷದ ಹಿಂದೆ ಬಳ್ಕುಂಜೆಗೆ ಬಂದಿದ್ದು, ದೈವಗಳಿಗೆ ಗುಡಿ ನಿರ್ಮಿಸಿ ಪ್ರತಿದಿನ ಪೂಜಿಸುತ್ತಿದ್ದರು.
ಇತ್ತೀಚೆಗೆ ಅವರು ಕೊರಗಜ್ಜನ ಮೇಲೆ ತನಗಿರುವ ಭಕ್ತಿಯ ಬಗ್ಗೆ ಹೇಳಿಕೊಂಡಿದ್ದರು.