ಡೈಲಿ ವಾರ್ತೆ:06 ಮಾರ್ಚ್ 2023

ವರದಿ: ವಿದ್ಯಾಧರ ಮೊರಬಾ

ಅಂಕೋಲಾದಲ್ಲಿ ಹಾಲಕ್ಕಿ ಸುಗ್ಗಿ ಸಂಪನ್ನ : ತಹಸೀಲ್ದಾರ್ ಅವರಿಂದ ತಾಮ್ರಪತ್ರ ಸ್ವೀಕಾರ

ಅಂಕೋಲಾ: ಹೋಳಿ ಹಬ್ಬದ ಅಂಗವಾಗಿ ಬ್ರಿಟಿಷ ಆಡಳಿತದಿಂದಲ್ಲೂ ನಡೆದು ಬಂದಿರುವ ತಾಲೂಕಿನ ವಿಶೇಷ ಆಕರ್ಷಣೆಯಾದ ಬೆಳಂಬಾರ ಹಾಲಕ್ಕಿ ಸಮಾಜದ ಸುಗ್ಗಿ ಕುಣಿತ ಮತ್ತು ವಿವಿಧ ಬಗೆಯ ರೂಪಕಗಳು ಪಟ್ಟಣದಲ್ಲಿ ಸೋಮವಾರ ಮೆರವಣಿಗೆ ಮಾಡುವುದರೊಂದಿಗೆ ಸೇರಿದ ಸಾವಿರಾರು ಜನರಿಗೆ ಮನರಂಜನೆಯನ್ನು ನೀಡಿ ತಾಲೂಕ ಕಚೇರಿಯಲ್ಲಿ
ತಹಸೀಲ್ದಾರ್ ಸತೀಶ ಟಿ.ಗೌಡ ಅವರಿಂದ ತಾಮಪತ್ರ ಸ್ವೀಕರಿಸಿದರು.

ಮೇರವಣಿಗೆಯಲ್ಲಿ ಆಟೋ ರಿಕ್ಷಾ ಮತ್ತು ಕಾಲ್ನಡಿಗೆ ವೇಷದಾರಿಗಳಾಗಿ ಮರಕಾಲು ಕುಣಿತ, ಸಮುದ್ರ ಮಂಥನ, 70 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮ್ಯಾರಥಾನ, ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ, ಶ್ರೀ ಶಿರಡಿ ಸಾಯಿಬಾಬಾ ಮೆರವಣಿಗೆ, ಹೆಲಿಕ್ಟಾಪರ್ ಚಿರತೆ, ಬೆಳಂಬಾರದಲ್ಲಿ ಗ್ಯಾಮದ್ಯೋಗ ಸಂಸ್ಥೆ, ಬಾಹುಬಲಿ, ಯಾಣದಲ್ಲಿ ಭಸ್ಮಾಸುರ, ಸೇರಿದಂತೆ ವಿವಿಧ ಅಣಕು ಪ್ರದರ್ಶನ ನಡೆಯಿತು. ಸುಗ್ಗಿ ತಂಡದ ಊರಗೌಡ ಷಣ್ಮುಖ ಗೌಡ,
ಕೃಷ್ಣ ಗೌಡ, ಪಾಂಡುರಂಗ ಗೌಡ, ಮಾದೇವ ಗೌಡ ಮೊದಲಾದವರು.

ಸುಗ್ಗಿ ಕುಣಿತ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.
ನಾಯ್ಕ, ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ, ಮುಖ್ಯಾಧಿಕಾರಿ ಎನ್.ಎಂ.ಮೇಸ್ತಾ, ಉಪತಹಸೀಲ್ದಾರ್ ಸುರೇಶ ಹರಿಕಂತ್ರ, ಗ್ರಾಪಂ.ಮಾಜಿ ಅಧ್ಯಕ್ಷ ಮಾದೇವ
ಗೌಡ, ಅರ್ಬ ನ ಬ್ಯಾಂಕಿನ ಅಧ್ಯಕ್ಷ ಭಾಸ್ಕರ ನಾರ್ವೇಕರ್, ಪ್ರಮುಖರಾದ ಸುಭಾಶ ನಾರ್ವೇಕರ್, ಸಂಜಯ ನಾಯ್ಕ, ಕವನಕುಮಾರ, ಎಂ.ಎಂ.ಕರ್ಕಿಕರ್ ಸೇರಿದಂತೆ ಉಪಸ್ಥಿತರಿದ್ದರು.

ಬುಹುಮಾನ ವಿಜೇತ :ಆಟೋರಿಕ್ಷಾದಲ್ಲಿ ಸಮುದ್ರ ಮಂಥನ (ಪ್ರಥಮ), ಹೆಲಿಕ್ಟಾಪರ್ ಚಿರತೆ (ದ್ವಿತೀಯ), ಬೆಳಂಬಾರದಲ್ಲಿ ಗ್ರಾಮೋದ್ಯೋಗ ಸಂಸ್ಥೆ. ಕಾಲ್ನಡಿಗೆಯಲ್ಲಿ ಬಾಹುಬಲಿ (ಪ್ರಥಮ), ಯಾಣದಲ್ಲಿ ಭಸ್ಮಾಸುರ (ದ್ವಿತೀಯ), ಶ್ರೀ ಶಿರಡಿ ಸಾಯಿಬಾಬಾ ಮೆರವಣಿಗೆ (ತೃತೀಯ)