ಡೈಲಿ ವಾರ್ತೆ:06 ಮಾರ್ಚ್ 2023

ಉಳ್ಳಾಲ ದರ್ಗಾ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಬಿ.ಜಿ.ಹನೀಫ್ ಹಾಜಿ ಆಯ್ಕೆ

ಉಳ್ಳಾಲ: ಉಳ್ಳಾಲ ದರ್ಗಾ ಮತ್ತು ಕೇಂದ್ರ ಜುಮಾ ಮಸೀದಿ(402) ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಬಿ.ಜಿ.ಹನೀಫ್ ಹಾಜಿ ಆಯ್ಕೆಗೊಂಡಿದ್ದಾರೆ.

ಇಂದು ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಇವರು ಆಯ್ಕೆಯಾಗಿದ್ದಾರೆ. ಮೇಲಂಗಡಿ ಮೊಹಲ್ಲಾದಿಂದ ಸ್ಪರ್ಧಿಸಿದ್ದ ಬಿ.ಜಿ.ಹನೀಫ್ ಹಾಜಿ ಮಾಸ್ತಿಕಟ್ಟೆ ನಿವಾಸಿ.

ಸಮಿತಿಯ ಉಪಾದ್ಯಾಕ್ಷರಾಗಿ ಅಳೇಕಲ ಮೊಹಲ್ಲಾದ
ರೈಟ್ ವೇ ಅಶ್ರಫ್, ಪ್ರಧಾನ ಕಾರ್ಯದರ್ಶಿಯಾಗಿ
ಮೇಲಂಗಡಿಯ ಶಿಹಾಬುದ್ದೀನ್ ಸಖಾಫಿ ಹಾಗೂ
ಕೊಶಾಧಿಕಾರಿಯಾಗಿ ಮುಕ್ಕಚ್ಚೇರಿ ಮೊಹಲ್ಲಾದ ನಾಝಿಂ ಕೋಟೆಪುರ ಆಯ್ಕೆಗೊಂಡಿದ್ದಾರೆ. ಉಳಿದ ಸ್ಥಾನಗಳಿಗೆ ಆಯ್ಕೆ ಇನ್ನಷ್ಟೇ ಆಗಬೇಕಾಗಿದೆ.

ಕೋಟೆಪುರ, ಮೇಲಂಗಡಿ, ಮುಕ್ಕಚ್ಚೇರಿ, ಅಳೇಕಲ, ಕಲ್ಲಾಪು ಹೀಗೆ ಐದು ಕರಿಯ(ವಲಯ)ಗಳಿಂದ ತಲಾ 11 ಮಂದಿಯಂತೆ 55 ಮಂದಿ ಸದಸ್ಯರ ಆಯ್ಕೆಗೆ 80 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.