ಡೈಲಿ ವಾರ್ತೆ:12 ಮಾರ್ಚ್ 2023

ಕಾಸರಗೋಡು: ಚಲಿಸುತ್ತಿದ್ದ ಕಾರು ಅಗ್ನಿಗಾಹುತಿ – ಪ್ರಯಾಣಿಕರು ಅಪಾಯದಿಂದ ಪಾರು
ಕಾಸರಗೋಡು: ಚಲಿಸುತ್ತಿದ್ದ ಕಾರು ಅಗ್ನಿ ಗಾಹುತಿಯಾದ ಘಟನೆ ವೆಳ್ಳ ರಿಕುಂಡು ಸಮೀಪದ ಮಾಲೋ ಎಂಬಲ್ಲಿ ನಡೆದಿದೆ.
ಕಾರಲ್ಲಿದ್ದವರು ಅಪಾಯದಿಂದ ಪಾರಾಗಿದ್ದು, ವಿವಾಹ ನಿಶ್ಚಯ ಕ್ಕೆ ತೆರಳುತ್ತಿದ್ದ ಕುಟುಂಬ ಸಂಚರಿಸುತ್ತಿದ್ದ ಕಾರು ಮಾಲೋ ಎಂಬಲ್ಲಿಗೆ ತಲಪಿದಾಗ ಬೆಂಕಿ ಕಾಣಿ ಸಿಕೊಂಡಿದೆ.

ಕಾರಲ್ಲಿದ್ದವರು ಹೊರ ಬಂದಿದ್ದು, ಇದರಿಂದ ಅಪಾಯ ತಪ್ಪಿದೆ. ಕಾರು ಸಂಪೂರ್ಣ ಅಗ್ನಿ ಗಾಹುತಿಯಾಗಿದೆ.