

ಡೈಲಿವಾರ್ತೆ:14/ಮಾರ್ಚ್/2026


ಕೋಟದಲ್ಲಿ ಆಧಾರ್ ನೋಂದಣಿ–ತಿದ್ದುಪಡಿ ಶಿಬಿರ: ಸಾರ್ವಜನಿಕರಿಗೆ ಅಂಚೆ ಇಲಾಖೆಯ ಸೇವೆಗಳ ಮಾಹಿತಿ

ಕೋಟ: ಗೀತಾನಂದ ಪೌಂಡೇಶನ್ ಮತ್ತು ಭಾರತೀಯ ಅಂಚೆ ಇಲಾಖೆ ಇವರ ಸಹಯೋಗದಲ್ಲಿ ಜನತಾ ಫಿಶ್ ಮೀಲ್ ಸಹಕಾರದೊಂದಿಗೆ ಸಾರ್ವಜನಿಕರ ಸೌಲಭ್ಯಕ್ಕಾಗಿ ಆಯೋಜಿಸಲಾದ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಅಭಿಯಾನ ಮತ್ತು ಅಂಚೆ ಇಲಾಖೆಯ ವಿವಿಧ ಸೇವೆಗಳ ಮಾಹಿತಿ ಶಿಬಿರ ದಿನಾಂಕ 12/03/26 ನೇ ಬುಧವಾರ ಜನತಾ ಫಿಶ್ ಮೀಲ್ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಗೀತಾನಂದ ಸಂಸ್ಥೆಯ ಪ್ರವರ್ತಕರಾದ ಆನಂದ ಸಿ ಕುಂದರ್ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರು ಸರ್ಕಾರದ ಪ್ರಮುಖ ಗುರುತು ದಾಖಲೆಗಳಾದ ಆಧಾರ್ ಸೇವೆಗಳನ್ನು ಸುಲಭವಾಗಿ ಪಡೆಯುವಂತೆ ಇಂತಹ ಶಿಬಿರಗಳು ಸಹಾಯಕವಾಗುತ್ತವೆ ಎಂದು ಹೇಳಿದರು. ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೆ ಆಧಾರ್ ನವೀಕರಣ, ಮೊಬೈಲ್ ಸಂಖ್ಯೆ ತಿದ್ದುಪಡಿ, ವಿಳಾಸ ಬದಲಾವಣೆ, ಬಯೋಮೆಟ್ರಿಕ್ ಅಪ್ಡೇಟ್ ಸೇರಿದಂತೆ ಅಗತ್ಯ ಸೇವೆಗಳು ಇಂತಹ ಶಿಬಿರದ ಮೂಲಕ ಲಭ್ಯವಾಗುವುದು ಜನರಿಗೆ ಅನುಕೂಲಕರ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಉಡುಪಿ ವ್ರತ್ತದ ಅಂಚೆ ಅಧೀಕ್ಷಕರಾದ ರಮೇಶ್ ಪ್ರಭು ಕುಂದಾಪುರ ದಕ್ಷಿಣ ಉಪ ವಲಯದ ಅಂಚೆ ನಿರೀಕ್ಷಕರಾದ ಪೋಲ ನಾಗಜನೆಯಲು ಮತ್ತು ಜನತಾ ಸಂಸ್ಥೆಯ ಎ ಜಿ ಎಮ್ ಶ್ರೀನಿವಾಸ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು, ಕೋಟ ಅಂಚೆ ಕಛೇರಿಯ ಸೌಮ್ಯ ಶ್ರೀ ಅಂಚೆ ಇಲಾಖೆಯ ವಿವಿಧ ಸೇವೆಗಳು ಹಾಗೂ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಗೀತಾನಂದ ಸಂಯೋಜಕರಾದ ರವಿಕಿರಣ್ ಕೋಟ ಕಾರ್ಯಕ್ರಮ ನಿರೂಪಿಸಿ ಜನತಾ ಸಂಸ್ಥೆಯ ವ್ಯವಸ್ಥಾಪಕಾರದ ಮಿಥುನ್ ಕುಮಾರ್ ಮತ್ತು ಗೀತಾನಂದ ಸಂಯೋಜಕರಾದ ದೀಕ್ಷಿತಾ
ಸಹಕರಿಸಿದರು
ಈ ಶಿಬಿರದ ಮೂಲಕ ಜನತಾ ಸಂಸ್ಥೆಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ತಮ್ಮ ಆಧಾರ್ ವಿವರಗಳನ್ನು ನವೀಕರಿಸಿಕೊಂಡು ಅಂಚೆ ಇಲಾಖೆಯ ಸೇವೆಗಳ ಕುರಿತು ತಿಳಿದುಕೊಂಡರು.