ಡೈಲಿ ವಾರ್ತೆ:13 ಮಾರ್ಚ್ 2023

ಮಲ್ಪೆ ಮಹಾಲಕ್ಷ್ಮೀ ಬ್ಯಾಂಕಿನ‌ ಮೆನೇಜರ್ ಅತ್ಮಹತ್ಯೆ ಪ್ರಕರಣ:
ಸುಬ್ಬಣ್ಣ ಕುಟುಂಬಸ್ಥರನ್ನು ಬೇಟಿ ಮಾಡಿದ ಉಡುಪಿ ದಲಿತ ಸಂಘಟನೆಯ ಮುಖಂಡ ಶೇಖರ್ ಹಾವಂಜೆ.
ಯಶ್ಪಾಲ್ ಸುವರ್ಣ ರನ್ನು‌ ಬಂಧಿಸಲು ಅಗ್ರಹ!

ಕೋಟ:ಮಹಾಲಕ್ಷ್ಮಿ ಬ್ಯಾಂಕಿನ‌ ಮೆನೇಜರ್ ಸುಬ್ಬಣ್ಣ ಅತ್ಮಹತ್ಯೆಗೆ ಸಂಭಂಧಿಸಿ ಪ್ರಮುಖ ಅರೋಪಿ ಯಶ್ಪಾಲ್ ಸುವರ್ಣ ಸಹಿತ ಇತರ ಅರೋಪಿಗಳನ್ನು ಪೊಲೀಸರು ಶೀಘ್ರ ಬಂಧಿಸುವಂತೆ ಉಡುಪಿ ದಲಿತ ಸಂಘರ್ಷ ಸಮಿತಿ ಭೀಮಾವಾದ ಹಾಗೂ ರಿಪಬ್ಲಿಕನ್ ಪಾರ್ಟಿ ಅಫ್ ಇಂಡಿಯಾ ರಾಜ್ಯ ಉಪಾಧ್ಯಕ್ಷ ಶೇಖರ್ ಹಾವಂಜೆ ಒತ್ತಾಯಿಸಿದ್ದಾರೆ.

ಭಾನುವಾರದಂದು ಕೊಟದಲ್ಲಿರುವ ಮೃತ ಸುಬ್ಬಣ್ಣ ರವರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ಕಳೆದ ಇಪ್ಪತೈದು ವರ್ಷ ಗಳಿಂದ ಇದೇ ಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಬ್ಬಣ್ಣ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಅವರಿಂದ ಸಹಾಯ ಪಡೆದುಕೊಂಡವರು, ಅವರ ಜೊತೆಗೆ ಕೆಲಸ ಮಾಡಿಕೊಂಡಿದ್ದ ಯಾವೊಬ್ಬ ಸಿಬಂದಿಗಳು ಅವರ ಮನೆಗಾಗಲೀ ಮನೆಯವರಿಗೆ ಕನಿಷ್ಟ ಸಾಂತ್ವನ ಹೇಳಲು ಬಾರದಿರುವುದನ್ನ ಗಮನಿಸಿದಾಗ ಈ ಅತ್ಮಹತ್ಯೆಯಲ್ಲಿ ಎನೋ ರಹಸ್ಯ ಅಡಗಿದೆ ಎನ್ನುವ ಅನುಮಾನ ಮೂಡುತ್ತಿದೆ.

ಮಹಾಲಕ್ಷ್ಮಿ ಬ್ಯಾಂಕಿನ ವ್ಯವಹಾರಗಳ ಬಗ್ಗೆ ಸಾರ್ವಜನಿಕರಿಗೆ ಹಿಂದಿನಿಂದಲೂ ಅನುಮಾನಗಳಿದ್ದು, ಹಲವು ರಹಸ್ಯಗಳು ಮೆನೇಜರ್ ಗೊತ್ತಿರುವ ಕಾರಣ ಯಶ್ಪಾಲ್‌ ಸುವರ್ಣ ಮತ್ತು ತಂಡ ಬೆದರಿಸಿರುವ ಸಾದ್ಯತೆಗಳಿವೆ..

ಅರೋಪಿಗಳು ಕ್ರಿಮಿನಲ್ ಹಿನ್ನಲೆ ಉಳ್ಳಾವರಾಗಿದ್ದು, ರಾಜಕೀಯವಾಗಿಯೂ, ಹಣ ಬಲ ತೋಳು ಬಲ‌ ಉಳ್ಳಾವರಾಗಿದ್ದು, ಸಾಕ್ಷಿ ನಾಶ ಮಾಡುವ ಸಾಧ್ಯತೆಗಳಿವೆ.
ಒರ್ವ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗೆ ದೌರ್ಜನ್ಯ ಅಗಿದ್ದು, ಪೊಲೀಸ್ ಇಲಾಖೆ ಯಶ್ಪಾಲ್ ಸುವರ್ಣ ರನ್ನು ಬಂಧಿಸುವಂತೆ ಶೇಖರ್ ಹಾವಂಜೆ ಅಗ್ರಹಿಸಿದರು.