ಡೈಲಿ ವಾರ್ತೆ: ಫೆ./05/2026

ಕೋಟ| ಫೆ.14ರಂದು ಚಿಟ್ಟಿಬೆಟ್ಟು ಕೊರಗ ಕಾಲೋನಿಯಲ್ಲಿ ಹೊಸ ಮನೆಗಳ ಹಸ್ತಾಂತರ: ಕೋಟತಟ್ಟು ಗ್ರಾಮ ಪಂಚಾಯತ್‌ನಿಂದ ಎಂಟು ಕುಟುಂಬಗಳಿಗೆ ಸ್ವಂತ ಗೃಹಭಾಗ್ಯ

ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ನೇತೃತ್ವದಲ್ಲಿ, ಸರಕಾರದ ಅನುದಾನ ಹಾಗೂ ಧಾನಿಗಳ ಸಹಕಾರದೊಂದಿಗೆ ಚಿಟ್ಟಿಬೆಟ್ಟು ಕೊರಗ ಕಾಲೋನಿಯಲ್ಲಿ ನಿರ್ಮಿಸಲಾದ ಎಂಟು ನೂತನ ಮನೆಗಳನ್ನು ದಿನಾಂಕ 14.02.2026 (ಶನಿವಾರ) ಫಲಾನುಭವಿಗಳಿಗೆ ಹಸ್ತಾಂತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಪ್ರತಿ ಮನೆಯ ನಿರ್ಮಾಣಕ್ಕೆ ತಲಾ ₹12 ಲಕ್ಷ ವೆಚ್ಚ ಮಾಡಲಾಗಿದ್ದು, ಹಿಂದುಳಿದ ಸಮುದಾಯದ ಕುಟುಂಬಗಳಿಗೆ ಭದ್ರ ಹಾಗೂ ಗೌರವಯುತ ವಾಸದ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ.

ಈ ಕಾರ್ಯಕ್ರಮವು ಗ್ರಾಮ ಪಂಚಾಯತ್ ಮಟ್ಟದಲ್ಲಿ ಒಂದು ವಿನೂತನ ಹಾಗೂ ಜನಪರ ಯೋಜನೆಯಾಗಿ ಗಮನ ಸೆಳೆದಿದೆ.
ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು, ಹಿತೈಷಿಗಳು ಹಾಗೂ ಸಾರ್ವಜನಿಕರು ಆಗಮಿಸಿ ಫಲಾನುಭವಿಗಳನ್ನು ಹಾರೈಸಿ, ಗ್ರಾಮ ಪಂಚಾಯತ್‌ನ ಈ ಜನಕಲ್ಯಾಣ ಯೋಜನೆಗೆ ಶುಭಾಶಯಗಳನ್ನು ತಿಳಿಸುವಂತೆ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಸತೀಶ್ ಕುಂದರ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ರವೀಂದ್ರ ರಾವ್ ತಮ್ಮ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.