ಡೈಲಿ ವಾರ್ತೆ:16 ಮಾರ್ಚ್ 2023

ವರದಿ: ವಿದ್ಯಾಧರ ಮೊರಬಾ

ಅಂಕೋಲಾ : ರಾಜಕೀಯದಲ್ಲಿ ನಮ್ಮೆಲ್ಲರ ಗುರುವಿನಂತಿರುವ ಹಿರಿಯ ಮುತ್ಸದ್ಧಿ ಆರ್. ವಿ.ದೇಶಪಾಂಡೆ ಯವರು ಜಿಲ್ಲೆಯ ಅಭಿವೃದ್ಧಿಗೆ ಮತ್ತು ರೂಡ್‍ಶೆಡ್ ಮೂಲಕ ಯುವಜನಕ್ಕೆ ತರಬೇತಿ ನೀಡುವುದರ ಮೂಲಕ ಉದ್ಯೋಗಸ್ಥರನ್ನಾಗಿ ಮಾಡುವಲ್ಲಿ ಅವರ ಶ್ರಮ ಅಪಾರವಾಗಿದೆ ಎಂದು
ಜಿಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಉಷಾ ಉದಯ ನಾಯ್ಕ ಹೇಳಿದರು.


ತಾಲೂಕಿನ ಅವರ್ಸಾ ವಿಜಯದುರ್ಗಾ ಸಭಾಭವನದಲ್ಲಿ ಗುರುವಾರ ಆಯೋಜಿಸಿದ ಮಾಜಿ ಸಚಿವ ಹಾಗೂ ಹಳಿಯಾಳ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆ ಅವರ 76 ಜನ್ಮದಿನದ ಅಂಗವಾಗಿ ಕೇಕ್ ಕತ್ತರಿಸುವ ಮೂಲಕ ಪರಿಶಿಷ್ಟ ಜಾತಿಯ 76 ಮಹಿಳೆಯರಿಗೆ ಸೀರೆ ವಿತರಿಸಿ ಮಾತನಾಡಿದರು.
ಭಾವಿಕೇರಿ ಗ್ರಾಪಂ.ಅಧ್ಯಕ್ಷ ಪಾಂಡು ಬಿ. ಗೌಡ ಮಾತನಾಡಿ, ದೇಶಪಾಂಡೆ ಅವರ ಜನ್ಮದಿನದ ನಿಮಿತ್ತ ನಮ್ಮ ಹಿರಿಯ ರಾಜಕಾರಣಿ ಉದಯ ನಾಯ್ಕ ಅವರ್ಸಾ ಅವರು ಕಳೆದ 18 ವರ್ಷದಿಂದ ಪರಿಶಿಷ್ಟ ಜಾತಿಯ ಮಹಿಳೆಯರಿಗೆ ಸೀರೆ ಮತ್ತು ಕುಪ್ಪಸ ವಿತರಿಸುವ ಕಾರ್ಯಕ್ಕೆ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಅವರ್ಸಾ ಗ್ರಾಪಂ.ಅಧ್ಯಕ್ಷೆ ಸ್ವಾತಿ ಮಾರುತಿ ನಾಯ್ಕ, ಭಾವಿಕೇರಿ ಗ್ರಾಪಂ.ಸದಸ್ಯ ಸುಕ್ರು ಗೌಡ, ಕಾಂಗ್ರೆಸ್ ಪಕ್ಷದ ಮುಖಂಡರಾದ ವಿನೋದ ಡಿ.ನಾಯ್ಕ ಹಾರವಾಡ, ಮಹಾಬಲೇಶ್ವರ ವಾಮನ ನಾಯ್ಕ ಮಂಜಗುಣಿ, ಶೇಖರ ಗೌಡ ಬೆಳಾಂಬರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜೈಶಾರ ದಾಂಬಾ ಸೌಹಾರ್ದ ಕ್ರೆಡಿಟ್ ಸಹಕಾರಿಯ ಮುಖ್ಯ
ವ್ಯವಸ್ಥಾಪಕ ಸುಧಾಕರ ಡಿ.ನಾಯ್ಕ, ಅವರ್ಸಾ ಶಾಖೆ ಯ ವ್ಯವಸ್ಥಾಪಕ ಅಮರ ಕೆ. ನಾಯ್ಕ ನಿರ್ವಹಿಸಿದರು.