ಡೈಲಿ ವಾರ್ತೆ:16 ಮಾರ್ಚ್ 2023

ಪಾಂಡೇಶ್ವರ- ನಮ್ಮಗೆ ಉಪ್ಪು ನೀರು ತಡೆಕಿಂಡಿ ಅಣೆಕಟ್ಟು ಬೇಡ, ನದಿಗೆ ತಡೆದಂಡೆ ನಿರ್ಮಿಸಿ, ವಾರಾಹಿ ನೀರು ಕಲ್ಪಿಸಿ ಗ್ರಾಮಸ್ಥರ ಆಗ್ರಹ!

ಕೋಟ: ಪಾಂಡೇಶ್ವರ ಗ್ರಾಮಪಂಚಾಯತ್ ಉಪ್ಪು ನೀರು
ತಡೆಕಿಂಡಿ ಅಣೆಕಟ್ಟು ನಿರ್ಮಾಣದ ಬಗ್ಗೆ ಹಾಗೂ ಅದರಿಂದಾಗುವ ಸಾಧಕ-ಭಾಧಕಗಳ ಕುರಿತು ವಿಶೇಷ
ಗ್ರಾಮಸಭೆ ಬುಧವಾರ ಪಂಚಾಯತ್ ಸಭಾಂಗಣದಲ್ಲಿ
ನಡೆಯಿತು.

ಪಾಂಡೇಶ್ವರ ಗ್ರಾಮದ, ಮೂಡಹಡು ಮತ್ತು ಬಾರ್ಕೂರು
ಬೆಣ್ಣೆಕುದ್ರು ಮಧ್ಯದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಸೀತಾನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಉಪ್ಪು ನೀರು ತಡೆಕಿಂಡಿ ಅಣೆಕಟ್ಟು ನಿರ್ಮಾಣದ ಬಗ್ಗೆ ಹಾಗೂ ಅದರಿಂದಾಗುವ ಸಾಧಕ-ಭಾಧಕಗಳ ಕುರಿತು ಇಲಾಖಾಧಿಕಾರಿಗಳ ಉಪಸ್ಥಿತಿಯಲ್ಲಿ ಚರ್ಚೆ ಏರ್ಪಟ್ಟಿತು.
ನಮ್ಮ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಉದ್ದೇಶವಿಟ್ಟು ನದಿಗೆ ತಡೆ ಕಿಂಡಿ ಅಣೆಕಟ್ಟು ನಿರ್ಮಿಸುವ ವಿಚಾರದಲ್ಲಿ
ಗ್ರಾಮಸ್ಥರ ಪರಿಗಣನೆ ನಿರ್ಲಕ್ಷಿಸಲಾಗಿದೆ.ಒಂದೊಮ್ಮೆ
ನಿರ್ಮಾಣಗೊಂಡರೆ ಉಪ್ಪುನೀರಿನ ಕೃತಕ ನೆರೆಸೃಷ್ಠಿಯಾಗಲಿದೆ. ಈಗಾಗಲೇ ಪ್ರತಿವರ್ಷ ಮಳೆಗಾಲದಲ್ಲಿ ನೀರು ಮನೆಯಂಗಳ
ತಲುಪುತ್ತಿದೆ.ಬೇಸಿಗೆಯಲ್ಲಿ ಹುಣ್ಣಿಮೆ ನೀರಿನ ಏರಿಳಿತದಿಂದ ನೀರು ತೋಟ, ಕೃಷಿ ಭೂಮಿಗಳಿಗೆ ನುಗ್ಗಲ್ಪಡುತ್ತಿದೆ ಇದರಿಂದ ಕೃಷಿಗೆ ಸಂಚಕಾರ ಬಂದೊದಗುತ್ತದೆ, ಇನ್ನು ಈ ತಡೆಕಿಂಡಿ ಅಣೆಕಟ್ಟು ನಿರ್ಮಿಸಿದರೆ ಸಮಸ್ಯೆ ಕಟ್ಟಿಟ್ಟಬುತ್ತಿ ಅಲ್ಲದೆ ಈ ಯೋಜನೆಯಿಂದ ಮೀನುಗಾರಿಕೆಗೂಸಮಸ್ಯೆ,ಸ್ಥಳೀಯ ಕುಡಿಯುವ ನೀರಿನ ಬಾವಿ ಕಲುಷಿತಗೊಳ್ಳುತ್ತದೆ,
ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು.

ಈ ಬಗ್ಗೆ ಉತ್ತರಿಸಿದ ಇಲಾಖಾಧಿಕಾರಿಗಳು ನಾವು ಇದರ ನೀಲನಕ್ಷೆ ಹಿಡಿದು ಇದರ ಬಗ್ಗೆ ಸಮರ್ಪಕ ಮಾಹಿತಿ ನೀಡಲು
ಬಂದಿದ್ದೇವೆ ಮಾಹಿತಿ ನೀಡಿದ ನಂತರ ನಿಮ್ಮ ಸಮಸ್ಯೆಯನ್ನು
ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂಬ ಉತ್ತರಕ್ಕೆ ಗ್ರಾಮಸ್ಥರು ನಮ್ಮಗೆ ಇಲ್ಲಿಬೇಕಾಗಿರುವುದು ಮಳೆಗಾಲದ ನೆರೆ ಪರಿಸ್ಥಿತಿಯನ್ನು ನಿಭಾಯಿಸಲು ನದಿಗೆ ತಡೆದಂಡೆ ಅಗತ್ಯವಿದ್ದು ಅದನ್ನು ಮೊದಲು ಅಳವಡಿಸಿ ಸೂಲುಕುದ್ರು ಮೂಡಹಡು, ಮಾಬುಕಳದ ತನಕ ನದಿಗೆ ತಡೆದಂಡೆ ನಿರ್ಮಿಸಿ ಸರಕಾರಕ್ಕೆ ಈ ಬಗ್ಗೆ ವರದಿ ನೀಡಿ ಅದನ್ನು ಬಿಟ್ಟು ಪ್ರಕೃತಿದತ್ತವಾದನದಿಗೆ ತಡೆಯೊಡ್ಡಿ ಸಿಹಿ ನೀರಿನ ವ್ಯವಸ್ಥೆ ಕಲ್ಪಿಸುವ ನಿಮ್ಮ ಈ
ಅಸಮರ್ಪಕ ಯೋಜನೆಯ ವಿರುದ್ಧ ಗ್ರಾಮಸ್ಥರು
ಹರಿಹಾಯ್ದರು. ನಮ್ಮಗೆ ಈ ನದಿಗೆ ತಡೆ ಬೇಡ ವಾರಾಹಿ ಸಿಹಿ ನೀರು ನೀಡಿ ಸಭೆಯಲ್ಲಿ ಗ್ರಾಮಸ್ಥರ ಆಗ್ರಹ ಸುಮಾರು 300ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುವ ಈ ತಡೆಕಿಂಡಿ
ಅಣೆಕಟ್ಟು ಬದಲು ವಾರಾಹಿ ಸಿಹಿ ನೀರು ನೀಡುವ ಯೋಜನೆಯಾಗಿ ಪರಿವರ್ತಿಸಿ ಆಗ ನಮ್ಮಗೆ ನೈಜ ಕುಡಿಯುವ
ನೀರಿನ ಬರ ನಿಗಬಹುದು ,ಈಅಣೆಕಟ್ಟು ಯೋಜನೆ ಪೂರ್ವನಿಯೋಜಿತ ಯೋಜನೆ ಗುತ್ತಿಗೆದಾರರ ಲಾಭದ
ಯೋಜನೆಯಾಗಿದೆ ಇದನ್ನು ಗ್ರಾಮಸ್ಥರು ಒಪ್ಪಲು ಸಾಧ್ಯವಿಲ್ಲ
ಎಂದು ಯೋಜನೆ ಕೈಬಿಟ್ಟು ಜನಸಾಮಾನ್ಯರಿಗೆ ಅನುಕೂಲಕ
ಯೋಜನೆ ರೂಪಿಸಿ ನಾವು ಪಂಚಾಯತ್‍ನಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಆಕ್ಷೇಪಣೆ ಸಲ್ಲಿಸಲಿವೆ ಎಂದು ಪಂಚಾಯತ್ ಸದಸ್ಯರಾದ ಚಂದ್ರಮೋಹನ್ ,ಪ್ರತಾಪ್
ಶೆಟ್ಟಿ,ವೈ ಬಿ ರಾಘವೇಂದ್ರ ಹೇಳಿದರು ಇದಕ್ಕೆ ಪಂಚಾಯತ್
ಹಾಗೂ ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷ ಕಲ್ಪನಾ ದಿನಕರ ಪೂಜಾರಿ
ಅಧ್ಯಕ್ಷತೆ ವಹಿಸಿದ್ದರು.ಉಡುಪಿ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಅರುಣ್ ಆರ್. ಭಂಡಾರಿ , ಸಹಾಯಕ ಇಂಜಿನಿಯರ್ ಪುನೀತ್, ಕನ್ಸಲ್ಟೆಂಟ್
ಇಂಜಿನಿಯರ್ ಡಾ. ಜಯರಾಜ್,ಪಂಚಾಯತ್ ಉಪಾಧ್ಯಕ್ಷ
ಸ್ವಿಲ್ವೆಸ್ಟಾರ್ ಡಿಸೋಜ ಹಾಗೂ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ವಡ್ಡರ್ಸೆ
ಹಾಗೂ ಕಾರ್ಯದರ್ಶಿ ವಿಜಯ ಸಭೆಯನ್ನು ನಿರ್ವಹಿಸಿದರು.
ಪಾಂಡೇಶ್ವರ ಗ್ರಾಮಪಂಚಾಯತ್ ಉಪ್ಪು ನೀರು ತಡೆಕಿಂಡಿ ಅಣೆಕಟ್ಟು ನಿರ್ಮಾಣದ ಬಗ್ಗೆ ಹಾಗೂ ಅದರಿಂದಾಗುವ
ಸಾಧಕ-ಭಾಧಕಗಳ ಕುರಿತು ವಿಶೇಷ ಗ್ರಾಮಸಭೆ ಬುಧವಾರ
ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.