ಡೈಲಿ ವಾರ್ತೆ:19 ಮಾರ್ಚ್ 2023

ಬಂಟ್ವಾಳ: ಮೂವರ ಮೇಲೆ ಹೆಜ್ಜೇನು ದಾಳಿ; ಓರ್ವ ಗಂಭೀರ

ಬಂಟ್ವಾಳ: ಮೂವರು ವ್ಯಕ್ತಿಗಳಿಗೆ ಹೆಜ್ಜೇನು ದಾಳಿ ಮಾಡಿ ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಕಲ್ಪನೆ ಎಂಬಲ್ಲಿ ನಡೆದಿದೆ.

ಕಲ್ಪನೆ ನಿವಾಸಿ ಪೂವಪ್ಪ (61) ಗಂಭೀರವಾಗಿ ಗಾಯವಾಗಿದ್ದು, ಅವರನ್ನು ಮಂಗಳೂರು ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಳಿದಂತೆ ಮಹೇಶ್ ಮತ್ತು ಗೋಪಾಲ್ ಇಬ್ಬರು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.