ಡೈಲಿ ವಾರ್ತೆ:26 ಮಾರ್ಚ್ 2023

ಶಾಸಕ ಕುಮಾರ್ ಬಂಗಾರಪ್ಪ ಹಟಾವೋ, ಬಿಜೆಪಿ ಬಚಾವೋ..: ನಮೋ ಕಾರ್ಯಕರ್ತರಿಂದ ಬೃಹತ್ ಬೈಕ್ ರ್‍ಯಾಲಿ

ಸೊರಬ: ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗರ ನಡುವೆ ಭಿನ್ನಮತ ಸ್ಫೋಟಗೊಂಡಿದ್ದು, ಸೊರಬ ಕ್ಷೇತ್ರದ ಶಾಸಕ ಕುಮಾರ ಬಂಗಾರಪ್ಪ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ.
ಕುಮಾರ್ ಬಂಗಾರಪ್ಪ ವಿರುದ್ಧ ಸೊರಬ ತಾಲೂಕಿನ ಮೂಲ ಬಿಜೆಪಿ ಹಾಗೂ ಆರ್ಎಸ್ಎಸ್ ಮುಖಂಡರು ಸೇರಿಕೊಂಡು ‘ನಮೋ ಸೊರಬ ವೇದಿಕೆ’ ಕೂಡ ಸ್ಥಾಪನೆ ಮಾಡಿದ್ದಾರೆ.

ಇಂದು(ಮಾರ್ಚ್ 26) ಬೃಹತ್ ಬೈಕ್ ರ್‍ಯಾಲಿ ಮಾಡಿದ ನಮೋ ವೇದಿಕೆಯ ಸಾವಿರಾರು ಕಾರ್ಯಕರ್ತರು ಯಾವುದೇ ಕಾರಣಕ್ಕೂ ಈ ಬಾರಿ ಕುಮಾರ್ ಬಂಗಾರಪ್ಪಗೆ ಬಿಜೆಪಿ ಟಿಕೆಟ್ ನೀಡದಂತೆ ಆಗ್ರಹಿಸಿದ್ದಾರೆ.

ಈ ವೇಳೆ ಬಿಜೆಪಿ ಹಿರಿಯ ಮುಖಂಡ ಪದ್ಮನಾಭ ಭಟ್ ಹಾಗೂ ಸೊರಬ ನಮೋ ವೇದಿಕೆಯ ಪಾಣಿ ರಾಜಪ್ಪ ಅವರು ಕುಮಾರ್ ಬಂಗಾರಪ್ಪ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದರು.