



ಡೈಲಿ ವಾರ್ತೆ:26 ಮಾರ್ಚ್ 2023


ಕರಾವಳಿ ಕಾವಲು ಪಡೆ ಹೆಲಿಕಾಪ್ಟರ್ ಕೊಚ್ಚಿಯಲ್ಲಿ ಟೇಕ್–ಆಫ್ ವೇಳೆ ಪತನ
ಕೊಚ್ಚಿ: ರವಿವಾರ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ತನ್ನ ಕೇಂದ್ರದಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಕರಾವಳಿ ರಕ್ಷಣಾ ಪಡೆಯ ಹೆಲಿಕಾಪ್ಟರ್ ಪತನವಾಗಿದ್ದು, ಘಟನೆಯಲ್ಲಿ ಓರ್ವ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ತರಬೇತಿಗಾಗಿ ನಿಯೋಜನೆಗೊಂಡಿದ್ದ ಹೆಲಿಕಾಪ್ಟರ್,
ಹೆಲಿಪ್ಯಾಡ್‌ನಿಂದ ಮೇಲೆ ಹಾರಿದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು ಎಂದು ಮೂಲಗಳು ತಿಳಿಸಿವೆ. ಪ್ರಾಥಮಿಕ ವರದಿಗಳ ಪ್ರಕಾರ, ಹೆಲಿಕಾಪ್ಟರ್‌ನಲ್ಲಿದ್ದ ಓರ್ವ ವ್ಯಕ್ತಿಗೆ ಮೂಳೆ ಮುರಿತವಾಗಿದೆ ಎಂದು ಮೂಲಗಳು PTI ಸುದ್ದಿ ಸಂಸ್ಥೆಗೆ ತಿಳಿಸಿವೆ.
ಕರಾವಳಿ ರಕ್ಷಣಾ ಪಡೆಯ ಕೇಂದ್ರವು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಕೀರ್ಣದ ಒಳಗಿದೆ.