ಡೈಲಿ ವಾರ್ತೆ:27 ಮಾರ್ಚ್ 2023

ನಾಡಬಾಂಬ್ ಬಾಂಬ್ ಎಸೆದು ಬಿಜೆಪಿ ಮುಖಂಡನ ಬರ್ಬರ ಹತ್ಯೆ! (ವಿಡಿಯೋ ವೀಕ್ಷಿಸಿ)

ಪುದುಚೇರಿ: ನಾಡಬಾಂಬ್ ಎಸೆದು ಬಿಜೆಪಿ ಮುಖಂಡನನ್ನು ದುಷ್ಕರ್ಮಿಗಳ ಗುಂಪೊಂದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪುದುಚೇರಿಯಲ್ಲಿ ನಡೆದಿದೆ.

ಮೃತ ಬಿಜೆಪಿ ಮುಖಂಡನನ್ನು ಸೆಂಥಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಸೆಂಥಿಲ್ ಕುಮಾರ್ ಮೇಲೆ ನಾಡಬಾಂಬ್ ಎಸೆದಿದ್ದಾರೆ. ನಂತರ ಸೆಂಥಿಲ್ ಕುಮಾರ್ ಬಳಿ ಹೋಗಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದಿದ್ದಾರೆ. ಭಾನುವಾರ ರಾತ್ರಿ ವಿಲಿಯನೂರು ಹಾಗೂ ಪುದುಚೇರಿ ರಸ್ತೆಯ ಬದಿಯ ಅಂಗಡಿಯೊಂದರಲ್ಲಿ ಚಹಾ ಸೇವಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಸೆಂಥಿಲ್ ಕುಮಾರ್ ಪುದುಚೇರಿ ಗೃಹ ಸಚಿವ ನಮಚಿವಾಯಂ ಅವರ ದೂರದ ಸಂಬಂಧಿಯಾಗಿದ್ದಾರೆ.