ಡೈಲಿ ವಾರ್ತೆ:01 ಏಪ್ರಿಲ್ 2023

✒️ ಓಂಕಾರ ಎಸ್. ವಿ. ತಾಳಗುಪ್ಪ

ಸಾರ್ವರ್ತಿಕ ವಿಧಾನಸಭಾ ಚುನಾವಣೆ – 2023 ಬಿಗಿ ಬಂದೋಬಸ್ತ್ : ಶಿವಮೊಗ್ಗ ಜಿಲ್ಲಾ ಗಡಿ ಹಾಗೂ ಕಾರವಾರ ಜಿಲ್ಲಾ ಗಡಿ ಭಾಗದಲ್ಲಿ ಸ್ಥಿರ ಕಣ್ಗವಾಲು ಪಡೆ

ಸಾಗರ: ಶಿವಮೊಗ್ಗ ಜಿಲ್ಲೆ ಹಾಗೂ ಕಾರವಾರ ಜಿಲ್ಲೆ ಗಡಿ ಭಾಗವಾದ ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂರಿಕಟ್ಟೆಯಲ್ಲಿ ಶಿವಮೊಗ್ಗ ಜಿಲ್ಲಾ ಹಾಗೂ ಕಾರವಾರ ಜಿಲ್ಲಾ ಚುನಾವಣಾ ಆಯೋಗವು ಕಟ್ಟು ನಿಟ್ಟಿನ ಸ್ಥಿರ ಕಣ್ಗಾವಲು ಪಡೆಯು ಕರ್ತವ್ಯ ನಿರ್ವಹಿಸುತ್ತಿದ್ದೂ, ಪೊಲೀಸರು ಹಾಗೂ ನಿಯೋಜಿತ ಇತರೆ ಇಲಾಖೆಯ ಸರ್ಕಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದೂ, ಹೆದ್ದಾರಿಯಲ್ಲಿ ಸಂಚರಿಸುವ ಪ್ರತಿಯೊಂದು ವಾಹನಗಳನ್ನೂ ಕಟ್ಟು ನಿಟ್ಟಾಗಿ ಕೂಲಂಕುಶವಾಗಿ ತನಿಖೆ ಮಾಡುತ್ತಿದ್ದಾರೆ.