ಡೈಲಿ ವಾರ್ತೆ:03 ಏಪ್ರಿಲ್ 2023

ರಾಹುಲ್‌ ಗಾಂಧಿಯ ಹೆಸರಿಗೆ ನಾಲ್ಕು ಹಂತಸ್ತಿನ ತನ್ನ ಸ್ವಂತ ಮನೆಯನ್ನು ಬರೆದುಕೊಟ್ಟ ಮಹಿಳೆ!

ನವದೆಹಲಿ;ರಾಹುಲ್ ಗಾಂಧಿ ಲೋಕಸಭೆಯಿಂದ ಅನರ್ಹರಾದ ಬಳಿಕ ಅವರ ಅಧಿಕೃತ ನಿವಾಸವನ್ನು ಖಾಲಿ ಮಾಡುವಂತೆ ಸೂಚನೆ ನೀಡಲಾಗಿತ್ತು. ಇದರ ಬೆನ್ನಲ್ಲೆ ರಾಹುಲ್ ಗಾಂಧಿಗೆ ಹಲವರು ಮನೆ ಕೊಡಲು ಮುಂದಾಗಿದ್ದರು.

ದೆಹಲಿ ಕಾಂಗ್ರೆಸ್ ಸೇವಾದಳದ ಅಧ್ಯಕ್ಷೆ ರಾಜಕುಮಾರಿ ಗುಪ್ತಾ ಅವರು ಮಂಗೋಲ್‌ಪುರಿ ಪ್ರದೇಶದಲ್ಲಿರುವ ತಮ್ಮ ನಾಲ್ಕು ಅಂತಸ್ತಿನ ಮನೆಯನ್ನು ಮಾಜಿ ಕಾಂಗ್ರೆಸ್ ಅಧ್ಯಕ್ಷರಿಗೆ ವರ್ಗಾಯಿಸಲು ನಿರ್ಧರಿಸಿದ್ದಾರೆ.


ಗುಪ್ತಾ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕಾಲದಲ್ಲಿ ಮನೆಯನ್ನು ಖರೀದಿಸಿದ್ದರು ಎಂದು ಹೇಳಲಾಗಿದೆ.
ದೆಹಲಿ ಮಹಿಳಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷೆ ಶ್ರೀಮತಿ ರಾಜಕುಮಾರಿ ಗುಪ್ತಾ ಅವರು ಮಂಗೋಲ್ಪುರಿ ಪ್ರದೇಶದಲ್ಲಿನ ತನ್ನ ಮನೆಯನ್ನು ರಾಹುಲ್ ಗಾಂಧಿ ಅವರ ಹೆಸರಿಗೆ ವರ್ಗಾಯಿಸಿದ್ದಾರೆ.

ಇದೇ ವೇಳೆ ಮಾತನಾಡಿದ ರಾಜಕುಮಾರಿ ಗುಪ್ತಾ, ರಾಹುಲ್ ಜಿ ಅವರನ್ನು ಮನೆಯಿಂದ ಓಡಿಸಬಹುದು, ಆದರೆ ಜನರ ಹೃದಯದಿಂದ ಅಲ್ಲ ಎಂದು ಹೇಳಿದರು. ಈ ಬಗ್ಗೆ ಕಾಂಗ್ರೆಸ್ ಸೇವಾದಳವು ಏಪ್ರಿಲ್ 1 ರಂದು ಹಿಂದಿಯಲ್ಲಿ ಟ್ವೀಟ್ ಮಾಡಿತ್ತು.


ರಾಹುಲ್ ಗಾಂಧಿಯ ಅನರ್ಹತೆ ಬಳಿಕ ಪ್ರಾರಂಭಿಸಿದ ‘ಮೇರಾ ಘರ್, ಆಪ್ಕಾ ಘರ್’ ಅಭಿಯಾನವನ್ನು ಕಾಂಗ್ರೆಸ್ ಆರಂಭಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಗಾಂಧಿ ಅವರ ಅನರ್ಹತೆಯ ವಿಷಯದ ಬಗ್ಗೆ ಪ್ರತಿಪಕ್ಷವು ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದೆ. ವಿರೋಧ ಪಕ್ಷದ ನಾಯಕರ ಧ್ವನಿಯನ್ನು ಹತ್ತಿಕ್ಕುವ ಕ್ರಮ ಎಂದು ಬಣ್ಣಿಸಿದೆ.

ಜನವರಿಯಲ್ಲಿ ಭಾಷಣ ಮಾಡುವಾಗ ರಾಹುಲ್ ಗಾಂಧಿ ಆರೆಸ್ಸೆಸ್ಸನ್ನು 21 ನೇ ಶತಮಾನದ ಕೌರವರು ಎಂದು ಕರೆದಿದ್ದು ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿನ ರಾಹುಲ್ ಗಾಂಧಿಯವರ ಹೇಳಿಕೆಗೆ ಸಂಬಂಧಿಸಿದಂತೆ ಉತ್ತರಾಖಂಡದ ಹರಿದ್ವಾರದ ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ವಿರುದ್ಧ ಹೊಸ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲಾಗಿದೆ.