

ಡೈಲಿ ವಾರ್ತೆ: ಫೆ./12/2026
ಮಧುವನ| ಅಜ್ಮೀರ್ ಮೌಲುದ್ ಸಂಭ್ರಮದಲ್ಲಿ ಹಯಾತುಲ್ ಇಸ್ಲಾಂ ಮದರಸ ಗುರುಗಳಿಗೆ ಸನ್ಮಾನ

ಕೋಟ: ಉಮಾರುಬೂನುಲ್ ಖತಾಬ್ ಜುಮ್ಮಾ ಮಸೀದಿ, ಮಧುವನ ಇದರ ಅಧೀನದಲ್ಲಿರುವ ಹಯಾತುಲ್ ಇಸ್ಲಾಂ ಮದರಸದ ಗುರುಗಳಾದ ಶಾಫಿ ಸಅದಿ, ಇಬ್ರಾಹಿಂ ಮದನಿ ಹಾಗೂ ಇಸ್ಮಾಯಿಲ್ ಸಅದಿ ಅವರನ್ನು ಸುನ್ನಿ ಬಾಲ ಸಂಘ (SBS) ವತಿಯಿಂದ ಆಯೋಜಿಸಲಾದ ಅಜ್ಮೀರ್ ಮೌಲುದ್ ಕಾರ್ಯಕ್ರಮದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ SBS ಕಮಿಟಿ ಅಧ್ಯಕ್ಷ ಕಲಂದರ್ ಬ್ಯಾರಿ ಅವರು ಗುರುಗಳನ್ನು ಶಾಲು ಹೊದಿಸಿ ಸನ್ಮಾನಿಸಿ, ಮದರಸ ಶಿಕ್ಷಣ ಕ್ಷೇತ್ರದಲ್ಲಿ ಅವರ ಸೇವೆಯನ್ನು ಪ್ರಶಂಸಿಸಿದರು. ಧಾರ್ಮಿಕ ಶಿಕ್ಷಣದ ಮೂಲಕ ಸಮಾಜದಲ್ಲಿ ಸೌಹಾರ್ದತೆ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಗುರುಗಳ ಪಾತ್ರ ಮಹತ್ವದ್ದೆಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರಹಮತ್ ಮುಬಾರಕ್, ಕಾರ್ಯದರ್ಶಿಗಳಾದ ಇಲ್ಯಾಸ್ ಹಾಗೂ ಉಸ್ಮಾನ್, ಹಾಜಿ ಸಾಹೇಬ್, ಅಶ್ರಫ್ ಉಸ್ತಾದ್ ಸೇರಿದಂತೆ ಹಲವಾರು ಗಣ್ಯರು ಮತ್ತು ಭಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮವು ಭಕ್ತಿಭಾವದ ವಾತಾವರಣದಲ್ಲಿ ನೆರವೇರಿತು.