ಡೈಲಿ ವಾರ್ತೆ:03 ಏಪ್ರಿಲ್ 2023
ರಾಹುಲ್ ಗಾಂಧಿ ಅವರ ಜಾಮೀನು ಅವಧಿಯನ್ನು ಎ.13 ರವರೆಗೆ ವಿಸ್ತರಿಸಿದ ಸೂರತ್ ನ್ಯಾಯಾಲಯ
ಗುಜರಾತ್:ಮೋದಿ ಉಪನಾಮದ ಬಗೆಗಿನ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೀಡಿದ ಜಾಮೀನು ಅವಧಿಯನ್ನು ಸೋಮವಾರ ಗುಜರಾತ್ ನ ಸೂರತ್ ಸೆಷನ್ಸ್ ನ್ಯಾಯಾಲಯ ವಿಸ್ತರಿಸಿದೆ.
ನ್ಯಾಯಾಲಯವು ರಾಹುಲ್ ಗಾಂಧಿಯವರ ಅರ್ಜಿಯನ್ನು ಸ್ವೀಕರಿಸಿ ಏಪ್ರಿಲ್ 13 ರಂದು ವಿಚಾರಣೆಗೆ ಮುಂದೂಡಿದೆ.
2024ರ ಲೋಕಸಭೆ ಚುನಾವಣೆಗೆ ಒಂದು ವರ್ಷ ಮೊದಲು ಸಂಸತ್ತಿನಿಂದ ರಾಹುಲ್ ಗೆ ಹೊರಹಾಕಲಾಯಿತು.ಅದಕ್ಕೂ ಮೊದಲು ನ್ಯಾಯಾಲಯ ಅವರಿಗೆ 2 ವರ್ಷ ಶಿಕ್ಷೆ ವಿಧಿಸಿತ್ತು.
ರಾಹುಲ್ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಎಐಸಿಸಿ ಸಂಘಟನೆಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ದಿಗ್ವಿಜಯ ಸಿಂಗ್ ಮತ್ತು ಆನಂದ್ ಶರ್ಮಾ ಸೇರಿದಂತೆ ಹಲವು ಹಿರಿಯ ನಾಯಕರು ಗುಜರಾತ್‌ನ ಸೆಷನ್ಸ್ ಕೋರ್ಟ್‌ಗೆ ಗಾಂಧಿ ಜೊತೆಗೆ ಬಂದಿದ್ದರು.