ಡೈಲಿ ವಾರ್ತೆ:03 ಏಪ್ರಿಲ್ 2023
ಏ. 6 ರಂದು ಕೋಟ ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥೋತ್ಸವ
ಕೋಟ: ಕೋಟ ಮಣೂರು ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಹೇರಂಬ ಮಹಾಗಣಪತಿ ದೇವಸ್ಥಾನದ ರಥೋತ್ಸವವು ದಿನಾಂಕ 6 ರಂದು ಗುರುವಾರ ನಡೆಯಲಿದೆ.
ದಿನಾಂಕ 03-04-2023ನೇ ಸೋಮವಾರದಿಂದ ಮೊದಲ್ಗೊಂಡು ದಿನಾಂಕ 08-04-2023ನೇ ಶನಿವಾರದವರೆಗೆ
ಶ್ರೀ ಮಹಾಲಿಂಗೇಶ್ವರ ದೇವರ ರಥೋತ್ಸವವು ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಲಿದೆ.
ದಿನಾಂಕ ಏಪ್ರಿಲ್ 3 ರಿಂದ 8ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ದಿನಾಂಕ : 03-04-2023ನೇ ಸೋಮವಾರ ಸಂಜೆ 6.30 ಕ್ಕೆ: ಉದ್ಘಾಟನೆ
ಸಂಜೆ 7:00 ಕ್ಕೆ: ಛಾಯ ತರಂಗಿಣಿ ಸಂಗೀತ ಶಾಲೆ ಇವರಿಂದ
ನಾದ ಸಂಗೀತ ಲಹರಿ ನಡೆಯಲಿದೆ.
ದಿನಾಂಕ: 04-04-2023 ರಂದು ಮಂಗಳವಾರ ಸಂಜೆ 7:30ಕ್ಕೆ ಕಲಾ ಚಿಗುರು ಕಲಾ ತಂಡ ಹಳ್ಳಾಡಿ ಇವರಿಂದ ಹೆಂಗ್ಸ್ರ್ ಪಂಚಾತಿ
ರಾತ್ರಿ 8.30ಕ್ಕೆ ಓಂಕಾರ್ ಕಲಾವಿದರಿಂದ “ಅಗೋಚರ” ನಾಟಕ ನಡೆಯಲಿದೆ.
ದಿನಾಂಕ: 05-04-2023 ರಂದು ಬುಧವಾರ ಸಂಜೆ 7: 30 ರಿಂದ
ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ ಯಕ್ಷಗಾನ ಬಯಲಾಟ
ದಿನಾಂಕ: 06-04-2023ರಂದು ಗುರುವಾರ ಬೆಳಿಗ್ಗೆ 11.00 ಕ್ಕೆ.
ರಾಜೇಶ್ ಭಟ್, ತುಳು ಚಲನಚಿತ್ರ ಸಂಗೀತ ನಿರ್ದೇಶಕರು, ಮೂಡಬಿದ್ರೆ ಇವರಿಂದ ಭಕ್ತಿಗಾನ ಸುಧೆ
ಮಧ್ಯಾಹ್ನ 12.15ಕ್ಕೆ ಶುಭಲಗ್ನದಲ್ಲಿ ರಥಾರೋಹಣ ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ
ಸಂಜೆ : 5.00 ರಿಂದ ಶ್ರೀರಾಮ ಮಹಿಳಾ ಭಜನಾ ಮಂಡಳಿ, ಮಣೂರು ಇವರಿಂದ ಭಜನೆ
ಸಂಜೆ : ರಥಯಾತ್ರೆ, ರಥಾವರೋಹಣ, ಆಲಯ ಪ್ರವೇಶ, ಮಂಗಳಾರತಿ, ಪ್ರಸಾದ ವಿತರಣೆ, ಸಂಹಾರ ಬಲಿ, ದೇವರ ಶಯನೋತ್ಸವ ನಡೆಯಲಿದೆ.
ರಥೋತ್ಸವದ ವಿಶೇಷ ಆಕರ್ಷಣೆಗಳು: ಕೀಲುಕುದುರೆ, ಡೊಳ್ಳುಕುಣಿತ, ಚಂಡೆವಾದನ ಬ್ಯಾಂಡ್‌ಸೆಟ್, ಹುಲಿವೇಷ ಹಾಗೂ ಸಿಡಿಮದ್ದು ಪ್ರದರ್ಶನಗೊಳ್ಳಲಿದೆ.
ದಿನಾಂಕ : 07-04-2023ರಂದು ಶುಕ್ರವಾರ
ಪ್ರಾತಃ : ಪ್ರಭೋದೋತ್ಸವ, ಅಷ್ಟಾವಧಾನ ಸೇವೆ, ಹೋಮ, ಕಲಶಾಭಿಷೇಕ ಪೂಜೆಗಳು ಸಂಜೆ : ಸಂಹಾರ ಬಲಿ ಚೂರ್ಣೋತ್ಸವ ಅವಭ್ರತ, ಪೂರ್ಣಾಹುತಿ, ಧ್ವಜಾವರೋಹಣ, ಮಹಾಮಂಗಳಾರತಿ, ಪ್ರಸಾದ ವಿತರಣೆ
ದಿನಾಂಕ: 08-04-2023ರಂದು ಶನಿವಾರ ಸಂಪ್ರೋಕ್ಷಣೆ
ಶ್ರೀ ದೇವರ ಪ್ರೇರಣೆ ಹಾಗೂ ಸಕಲ ಭಕ್ತರ ಸಂಪೂರ್ಣ ಪ್ರೋತ್ಸಾಹದಿಂದಲೇ ನಡೆಯುವ ಈ ದೇವತಾ ಕಾರ್ಯಕ್ಕೆ ತಾವು ಅಗಮಿಸಿ, ತನು-ಮನ-ಧನ ಸಹಾಯವನ್ನಿತ್ತು, ಶ್ರೀ ದೇವರ ಸಿರಿಮುಡಿ ಗಂಧ-ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಚ್ ಕುಂದರ್ ವಿನಂತಿಸಿದ್ದಾರೆ.