ಡೈಲಿ ವಾರ್ತೆ:06 ಏಪ್ರಿಲ್ 2023

ದಕ್ಷಿಣ ಕನ್ನಡ:ಇಬ್ಬರು ಗೋಕಳ್ಳರ ಬಂಧನ

ಕಾವೂರು:ಗೋಕಳ್ಳತನ‌ದ ಆರೋಪದಲ್ಲಿ ಇಬ್ಬರನ್ನು ಬಂಧಿಸಿರುವ ಘಟನೆ ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ಅಮ್ಮೆಮಾರ್ ನಿವಾಸಿ ಸಾಹುಲ್ ಹಮೀದ್(33) ಮತ್ತು ಮಹಮ್ಮದ್ ಸಾದಿಕ್ ಬಂಧಿತ ಆರೋಪಿಗಳು.

ಆರೋಪಿಗಳು ಫೆಬ್ರವರಿ 11ರಂದು ಕಾವೂರು ಗಾಂಧಿನಗರದಲ್ಲಿ ಗೋವಿನ ಕರುವನ್ನು ಕಳವು ಮಾಡಿದ್ದರು ಎನ್ನಲಾಗಿದೆ.
ಬಂಧನದ ವೇಳೆ ಪೊಲೀಸರು ಆರೋಪಿಗಳಿಂದ 1,50,000 ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಠಾಣೆಗಳಲ್ಲಿ ಈ ಮೊದಲು ಪ್ರಕರಣ ದಾಖಲಾಗಿತ್ತು ಎಂದು ವರದಿ ತಿಳಿಸಿದೆ.