

ಡೈಲಿ ವಾರ್ತೆ: ಫೆ./10/2026
ಮಂಗಳೂರು ಸಮೀಪ ಭೀಕರ ರಸ್ತೆ ಅಪಘಾತ: ಭಟ್ಕಳದ ಮೂಲದ ವಿದ್ಯಾರ್ಥಿ ಮೃತ್ಯು

ಭಟ್ಕಳ, ಫೆ.10: ಮಂಗಳೂರು ಸಮೀಪ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಭಟ್ಕಳದ ಸಮೀರ್ ಶಾಬಂದ್ರಿ ಅವರ ಪುತ್ರ, ವಿದ್ಯಾರ್ಥಿ ಇಫಾಮ್ ಶಾಬಂದ್ರಿ (18) ಮೃತಪಟ್ಟಿದ್ದಾರೆ.
ಇಫಾಮ್ ಅವರು ತಮ್ಮ ಸ್ನೇಹಿತರೊಂದಿಗೆ ಭಟ್ಕಳದಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಎದುರಿನಿಂದ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ಡಿಕ್ಕಿಯ ತೀವ್ರತೆಯಿಂದ ಇಫಾಮ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅದೇ ಕಾರಿನಲ್ಲಿ ಇದ್ದ ಇತರ ಸ್ನೇಹಿತರು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.
ಅಪಘಾತದ ಮಾಹಿತಿ ದೊರಕುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ.