ಡೈಲಿ ವಾರ್ತೆ:07 ಏಪ್ರಿಲ್ 2023
ಮಾಣಿ ಪೆರಾಜೆ ಮಠದ ಕೋದಂಡ ಮಹಾದ್ವಾರ
ದಕ್ಷಿಣ ಕನ್ನಡ: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಾ ಬದಿಯಲ್ಲಿ ಪೆರಾಜೆ ಎಂಬಲ್ಲಿ ಮಾಣಿ ಮಠಕ್ಕೆ ಹೋಗಲು ಸ್ವಾಗತ ಕಮಾನನ್ನು ವಿಶಿಷ್ಟ ರೀತಿಯಲ್ಲಿ ಧನುಸ್ಸು ಸ್ವಾಗತ ಕಮಾನ್ ನಿರ್ಮಿಸಿದ್ದು ಎತ್ತಿದರೆ ಗಧೆ ಎಂಬಂತೆ ಎರಡು ಗಧೆ ಮೇಲೆ ಧನುಸ್ಸು ಅನ್ನು ನಿರ್ಮಿಸಿ ನಬೋಮಂಡಲಕ್ಕೆ (ಅಂಬರಕ್ಕೆ) ಬಾಣ ಚಿಮ್ಮುವಂತೆ ಸುಂದರ ನಿರ್ಮಾಣ ಎಲ್ಲರ ಪ್ರಸಂಶೆಗೆ ಕಾರಣವಾಗಿದ್ದು ಇದನ್ನು ಗಾಂಡಿವ, ಕೋದಂಡ ಧನುಸ್ಸು, ಬಿಲ್ಲು ಬಾಣ ಎಂದೆಲ್ಲಾ ಕರೆಯುವರು. ಇದಕ್ಕೆ ಅತ್ಯಾಕರ್ಷಕ ಬಣ್ಣದ ಸಂಯೋಜನೆ ಎಲ್ಲರನ್ನೂ ತನ್ನಡೆಗೆ ಸೆಳೆಯುತ್ತಿದೆ. ಹೆದ್ದಾರಿಯಲ್ಲಿ ಹೋಗುವ ವೀಕ್ಷಕರು ಇದನ್ನು ನೋಡಿ ಕಣ್ಣು ತುಂಬಿಕೊಳ್ಳುತ್ತಾರೆ .ಇತ್ತೀಚೆಗೆ ನೂತನ ಶಿಲಾಮಯ ಗರ್ಭಗುಡಿಯಲ್ಲಿ ಸಪರಿವಾರ ಶ್ರೀರಾಮದೇವರ ರಜತ ಸೋಪಾನ ಪೀಠದಲ್ಲಿ ಶ್ರೀ ಸೀತಾರಾಮಚಂದ್ರ ಚಂದ್ರ ಮೌಳೇಶ್ವರ ರಾಜರಾಜೇಶ್ವರಿ ದೇವರ ಪುನಃ ಪ್ರತಿಷ್ಠೆ ಹಾಗೂ ಸಾರ್ವಲಂಕಾರ ಭೂಷಿತ ಸುವರ್ಣ ಮಂಟಪದಲ್ಲಿ ನಡೆಯಿತು.
ಮರಕ್ಕೆ ಬೇರು ಎಷ್ಟು ಮುಖ್ಯವೋ ಹಾಗೆ ಮನುಷ್ಯನಿಗೆ ನಂಬಿಕೆಯೂ ಕೂಡ ಅಷ್ಟೇ ಮುಖ್ಯ ಬೇರು ಇಲ್ಲವಾದರೆ ಮರ ಉಳಿಯುವುದಿಲ್ಲ ನಂಬಿಕೆ ಇಲ್ಲವಾದರೆ ಸಂಬಂಧಗಳು ಉಳಿಯುವುದಿಲ್ಲ. ಸಾಧನೆಯೇ ಮಾತನಾಡಬೇಕೆ ಹೊರತು ಮಾತನಾಡುವುದೇ ಸಾಧನೆ ಆಗಬಾರದು.