ಡೈಲಿ ವಾರ್ತೆ:11 ಏಪ್ರಿಲ್ 2023
ಅಡೂರು ಹೊಳೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಮೃತ್ಯು
ಕಾಸರಗೋಡು:ಹೊಳೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಕರ್ನಾಟಕ – ಕೇರಳ ಗಡಿ ಭಾಗವಾದ ಸುಳ್ಯದ ಅಡೂರಿನ ದೇವರಡ್ಕ ಸಮೀಪದ ನದಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಅಡೂರು ದೇವರಡ್ಕದ ನಿವಾಸಿ ಶಾಫಿ ಎಂಬವರ ಪುತ್ರ ಮುಹಮ್ಮದ್ ಆಶೀಕ್ (7) ಮತ್ತು ಹಸೈನಾರ್ ರವರ ಪುತ್ರ ಮುಹಮ್ಮದ್ ಫಾಸಿಲ್(9)ಮೃತಪಟ್ಟ ಮಕ್ಕಳು.
ಈ ಮಕ್ಕಳು ಮಧ್ಯಾಹ್ನ ಅಡೂರು ದೇವರಡ್ಕದಲ್ಲಿ ಹೊಳೆಗೆ ಸ್ನಾನಕ್ಕಿಳಿದ ವೇಳೆ ಮುಳುಗುತ್ತಿರುವುದನ್ನು ಗಮನಿಸಿದ ಇತರ ಮಕ್ಕಳು ಕೂಡಲೇ ಸ್ಥಳೀಯರಿಗೆ ತಿಳಿಸಿದ್ದಾರೆ. ಸ್ಥಳೀಯರು ಬಂದು ರಕ್ಷಿಸಿ ಮುಳ್ಳೆರಿಯದ ಆಸ್ಪತ್ರೆಗೆ ತಲುಪಿಸಿದ್ದಾರೆ. ಆದರೆ ಈ ವೇಳೆ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿ ಈ ಕುರಿತು ತನಿಖೆ ನಡೆಸುತ್ತಿದ್ದಾರೆ.