



ಡೈಲಿ ವಾರ್ತೆ:15 ಏಪ್ರಿಲ್ 2023


ಕಚೇರಿಗೆ ನುಗ್ಗಿ ಬಿಜೆಪಿ ನಾಯಕನ ಬರ್ಬರ ಹತ್ಯೆ
ನವದೆಹಲಿ: ಕಚೇರಿಗೆ ನುಗ್ಗಿ ಬಿಜೆಪಿ ನಾಯಕ ಸುರೇಂದ್ರ ಮಟಿಯಾಲ ಅವರನ್ನು ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ದೆಹಲಿಯಲ್ಲಿ ನಡೆದಿದೆ.
ಮಟಿಯಾಲ ಹಾಗೂ ಅವರ ಸೋದರಳಿಯನ ಜೊತೆ ತಮ್ಮ ಕಚೇರಿಯಲ್ಲಿ ಸಂಜೆ ಸುಮಾರು 7:30 ರ ಹೊತ್ತಿಗೆ ಟಿವಿ ವೀಕ್ಷಿಸುತ್ತಿದ್ದ ವೇಳೆ ಕಚೇರಿ ಒಳಗೆ ಹೆಲ್ಮೆಟ್ ಧರಿಸಿಕೊಂಡು ಬಂದ ಇಬ್ಬರು ದುಷ್ಕರ್ಮಿಗಳು ಮಟಿಯಾಲ ಅವರ ಮೇಲೆ ಮನ ಬಂದಂತೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟರು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.