ಡೈಲಿ ವಾರ್ತೆ: 13/NOV/2025

ಎಲ್‌.ಎಲ್‌.ಎಂ ಪದವಿಯಲ್ಲಿ ರಾಜ್ಯದಲ್ಲಿಯೇ ದ್ವಿತೀಯ ರ‍್ಯಾಂಕ್‌ ಪಡೆದ ಮೊಮಿನ್ ಮುಫಿದಾ ಬೇಗಂ

ಕುಂದಾಪುರ : ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಿಂದ ವ್ಯಾಪಾರ ಮತ್ತು ವಾಣಿಜ್ಯ ಕಾನೂನಿನ ಎಲ್‌.ಎಲ್‌.ಎಂ. ಪದವಿಯಲ್ಲಿ ಬೈಂದೂರು ನಾಗೂರಿನ ಶ್ರೀಮತಿ ಮುಫಿದಾ ಬೇಗಂ ಅವರಿಗೆ ರಾಜ್ಯದಲ್ಲಿಯೇ ದ್ವಿತೀಯ ರ‍್ಯಾಂಕ್‌ ಪ್ರಶಸ್ತಿ ಲಭಿಸಿದೆ. ಹುಬ್ಬಳ್ಳಿಯಲ್ಲಿ ಜರಗಿದ ವಿಶ್ವ ವಿದ್ಯಾಲಯದ 7ನೇ ಘಟಿಕೋತ್ಸವ ಸಮಾರಂಭದಲ್ಲಿ ಕರ್ನಾಟಕ ರಾಜ್ಯಪಾಲರಾದ ಗೌರವಾನ್ವಿತ ಥಾವರ್ ಚಂದ್ ಗೆಹ್ಲೋತ್ ಅವರಿಂದ ಮುಫಿದಾ ಬೇಗಂ ಪ್ರಶಸ್ತಿ ಯನ್ನು ಸ್ವೀಕರಿಸಿದರು.
ಮಂಗಳೂರು ಏಸ್‌.ಡಿ.ಎಂ. ಕಾನೂನು ಕಾಲೇಜು, ವಿದ್ಯಾರ್ಥಿನಿಯಾಗಿರುವ ಇವರು ನಾಗೂರಿನ ಮಹಮ್ಮದ್ ಮುಬಿನ್ ಝಕೀರಾ ಬೇಗಂ ದಂಪತಿ ಪುತ್ರಿ ಹಾಗೂ ನ್ಯಾಯವಾದಿ ಅಜ್ಮಲ್ ಷಾ ಅವರ ಪತ್ನಿಯಾಗಿರುತ್ತಾರೆ.