ಡೈಲಿ ವಾರ್ತೆ:25 ಏಪ್ರಿಲ್ 2023
✒️ ಓಂಕಾರ ಎಸ್. ವಿ. ತಾಳಗುಪ್ಪ
ಶಿರವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅನಿಲ್ ಕುಮಾರ್ ಗೌಡ್ರು & ಅಪಾರ ಬೆಂಬಲಿಗರೊಂದಿಗೆ ಮಧು ಬಂಗಾರಪ್ಪ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ
ಶಿರವಂತೆ :-ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಹೋಬಳಿಯ ಶಿರವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅನಿಲ್ ಕುಮಾರ್ ಗೌಡ್ರು ಹಾಗೂ ಅಪಾರವಾದ ಬೆಂಬಲಿಗರೊಂದಿಗೆ ಸೊರಬ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ಅಭ್ಯರ್ಥಿ *ಮಧು ಬಂಗಾರಪ್ಪ ಸಮ್ಮುಖದಲ್ಲಿ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಗಾಳಿಪುರ ಲೋಕೇಶ್ ಮಾಜಿ ಅಧ್ಯಕ್ಷರು ಶಿರವಂತೆ ಗ್ರಾಮ ಪಂಚಾಯಿತಿ ಸಾರಥ್ಯದಲ್ಲಿ ಸೇರ್ಪಡೆಯಾದರು.
ಶಿರವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅನಿಲ್ ಕುಮಾರ್ ಗೌಡ್ರು ಪ್ರಾಮಾಣಿಕವಾಗಿ ನಿಸ್ವಾರ್ಥ ಸೇವೆ ಮಾಡುತ್ತಾ ಜನಮಾನಸದಲ್ಲಿ ಹೆಸರುವಾಸಿಯಾಗಿದ್ದು, ಇವರ ಜೊತೆ ಅಪಾರವಾದ ಬೆಂಬಲಿಗರನ್ನೂ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬಂದಿರುವುದು ಈ ಭಾಗದಲ್ಲಿ ಆನೆಬಲ ಬಂದಂತೆಯಾಗಿದೆ ಎಂದು ಮಧು ಬಂಗಾರಪ್ಪ ಮಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು
ಬಿಜೆಪಿ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನೂ ಶಾಸಕ ಕುಮಾರ್ ಬಂಗಾರಪ್ಪ ಹಾಗೂ ಬಿಜೆಪಿ ಪಕ್ಷದ ಮುಖಂಡರುಗಳು ನಿರ್ಲಕ್ಷ ಮಾಡಿರುವುದಕ್ಕೆ ಬೇಸತ್ತು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ ಈ ಬಾರಿ ಕಾಂಗ್ರೆಸ್ ಪಕ್ಷದ ಸೊರಬ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಮಧು ಬಂಗಾರಪ್ಪರವನ್ನು ಅತೀ ಹೆಚ್ಚಿನ ಬಹುಮತದಿಂದ ಗೆಲ್ಲಿಸಿವುದೇ ನನ್ನ ಹಾಗೂ ನನ್ನ ಜೊತೆ ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನನ್ನ ಆತ್ಮೀಯ ಬೆಂಬಲಿಗರ ಗುರಿ ಎಂದು ಶಿರವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅನಿಲ್ ಕುಮಾರ್ ಗೌಡ್ರು ಮಾಧ್ಯಮ ಹೇಳಿಕೆ ನೀಡಿದರು
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ತಾಳಗುಪ್ಪ ಹೋಬಳಿಯ ಅಧ್ಯಕ್ಷರಾದ ಶಿವಮೂರ್ತಿ ಮಂಡಗಳಲೆ, ಲೋಕೇಶ್ ಗಾಳಿಪುರ, ಬಸವರಾಜ್ ಗಾಳಿಪುರ, ಜಗದೀಶ್ ಗಾಳಿಪುರ, ಮನೋಜ್ ಜನ್ನೆಹಕ್ಲು ಅಶೋಕ್ ಮರಗಿ ಬರದವಳ್ಳಿ, ಮೈಲಪ್ಪ ಗಾಳಿಪುರ, ಶಿರವಂತೆ ಘಟಕದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಚಂದ್ರಣ್ಣ ಬರದವಳ್ಳಿ, ಗಾಳಿಪುರ ಬೂತ್ ಕಮಿಟಿ ಅಧ್ಯಕ್ಷ ಕೃಷ್ಣಪ್ಪ ಗಾಳಿಪುರ ಇನ್ನಿತರ ಕಾಂಗ್ರೆಸ್ ಮುಖಂಡರು ಹಾಜರಿದ್ದರು