ಡೈಲಿ ವಾರ್ತೆ:26 ಏಪ್ರಿಲ್ 2023
ಏ. 29 ರಂದು ತೆಕ್ಕಟ್ಟೆಯಲ್ಲಿ ರಸಋಷಿ ರಘುರಾಮಂ, ಯಕ್ಷಕವಿ ವಂದನಂ
ತೆಕ್ಕಟ್ಟೆ: ಏಪ್ರಿಲ್, 29: “ರಸಋಷಿ ರಘುರಾಮಂ” ‘ಯಕ್ಷಕವಿ ವಂದನಂ’ ಕಾರ್ಯಕ್ರಮವು ಶ್ವೇತಛತ್ರ ಯಕ್ಷಮಿತ್ರ (ರಿ.) ಕೋಣಿ, ಕುಂದಾಪುರ ಇವರ ಸಹಯೋಗದಲ್ಲಿ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಏಪ್ರಿಲ್ 29ರಂದು ಸಂಜೆ 4:30ಕ್ಕೆ ಕಂದಾವರ ರಘುರಾಮ ಶೆಟ್ಟಿಯವರಿಗೆ ಅಭಿನಂದಿಸುವ ಕಾರ್ಯಕ್ರಮವಾಗಿ ಜರುಗಲಿದೆ.
ಪೆರ್ಡೂರು ಮೇಳದ ಯಜಮಾನರಾದ ವೈ. ಕರುಣಾಕರ ಶೆಟ್ಟಿ, ಸಂಕಾಪುರ ಶಿವರಾಮ ಶೆಟ್ಟಿ ಅರ್ಥದಾರಿಗಳು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಹಿರಿಯ ಕಲಾವಿದ ಎಂ.ಕೆ. ರಮೇಶ್ ಆಚಾರ್ಯ, ಎಂ.ಐ.ಟಿ ಉಪನ್ಯಾಸಕರಾದ ಎಸ್.ವಿ. ಉದಯ್ ಕುಮಾರ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಶ್ರೀ ದುರ್ಗಾ ಕನ್ಸ್‍ಟ್ರಕ್ಷನ್ ದಾಂಡೇಲಿ, ಬೆಳ್ವೆ ಶ್ರೀನಿವಾಸ ಆಚಾರ್ಯ, ಪ್ರಸಂಗಕರ್ತ ಪ್ರಸಾದ್‍ಕುಮಾರ್ ಮೊಗೆಬೆಟ್ಟು ಗೌರವ ಉಪಸ್ಥಿತಿಯಲ್ಲಿದ್ದಾರೆ. ಸತೀಶ್ ಶೆಟ್ಟಿ ಮೂಡುಬಗೆ ನಿರೂಪಣೆಯಲ್ಲಿರುತ್ತಾರೆ. ಬಳಿಕ ಪ್ರಸಿದ್ಧ ಕಲಾವಿದರಿಂದ ಗಾನ ವೈಭವ ಕಾರ್ಯಕ್ರಮ ರಂಗದಲ್ಲಿ ಪ್ರಸ್ತುತಿಗೊಳ್ಳಲಿದೆ ಎಂದು ಶ್ವೇತಛತ್ರ ಯಕ್ಷಮಿತ್ರದ ಅಧ್ಯಕ್ಷ ಸುರೇಶ್ ಶೆಟ್ಟಿ ಶಂಕರನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ