



ಡೈಲಿ ವಾರ್ತೆ:28 ಏಪ್ರಿಲ್ 2023


ದಕ್ಷಿಣ ಕನ್ನಡ:ಕಾರಿನಲ್ಲಿ ಬಂದ ಅಪರಿಚಿತ ತಂಡದಿಂದ ಆಟೋ ಚಾಲಕನಿಗೆ ಹಲ್ಲೆ – ಆಸ್ಪತ್ರೆಗೆ ದಾಖಲು!
ಉಪ್ಪಿನಂಗಡಿ:ಓವರ್ ಟೇಕ್ ವಿಚಾರದಲ್ಲಿ ಜಗಳ ನಡೆದು ರಿಕ್ಷಾ ಚಾಲಕನ ಮೇಲೆ ಕೇರಳ ನೋಂದಣಿಯ ಕಾರಿನಲ್ಲಿದ್ದ ತಂಡ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.
ಕಡಬ ತಾಲೂಕಿನ ಅಡ್ಡಹೊಳೆ ಬಳಿ ಘಟನೆ ನಡೆದಿದೆ ಎನ್ನಲಾಗಿದೆ.ಶಿರಾಡಿ ಗ್ರಾಮದ ಪೆರುಮಜಲು ನಿವಾಸಿ ಆಟೋ ಚಾಲಕ ವಿಶ್ವನಾಥ್ ಈ ಕುರಿತು ದೂರು ನೀಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಡ್ಡಹೊಳೆಯ ಪೆಟ್ರೋಲ್ ಬಂಕ್ ಬಳಿ ಓವರ್ ಟೇಕ್ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಕೇರಳ ನೋಂದಣಿಯ ಕಾರಿನಲ್ಲಿದ್ದ 7-8 ಮಂದಿಯ ತಂಡ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ಕುರಿತು ವಿಶ್ವನಾಥ್ ದೂರನ್ನು ನೀಡಿದ್ದು, ಪುತ್ತೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ.