ಡೈಲಿ ವಾರ್ತೆ:09 ಮೇ 2023

SSLC ಪರೀಕ್ಷೆ ಫಲಿತಾಂಶ: ಸಾಗರದ ರಾಬಿಯ ಆಂಗ್ಲ ಮಾಧ್ಯಮ ಶಾಲೆ ಶೇ.100 ಫಲಿತಾಂಶ ದಾಖಲೆ

ಸಾಗರ: ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು 2022-23ನೇ ಸಾಲಿನ ಮೇ. 8 ರಂದು ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಿದ್ದು ಸಾಗರದ ರಾಬಿಯಾ ಆಂಗ್ಲ ಮಾಧ್ಯಮ ಶಾಲೆಯು ಶೇ. 100 ಫಲಿತಾಂಶವನ್ನು ದಾಖಲಿಸಿಕೊಂಡಿದೆ.

ಸಂಸ್ಥೆಯ ವಿದ್ಯಾರ್ಥಿನಿ ರಿಫಾ ಖಾನಂ 565 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದರೇ, ಆತಿಯಾ ರಬ್ಬಿ 539, ಆಯಿಷಾ ಸಿಮ್ರಾ 516, ಸಲ್ಮಾ 503 ಅಂಕ ಪಡೆದಿದ್ದಾರೆ.
ಉತ್ತಮ ಫಲಿತಾಂಶ ತಂದ ವಿದ್ಯಾರ್ಥಿಗಳಿಗೆ ಶಾಲೆಯ ಚೇರ್ಮನ್ ವಹಾಬ್ ಖಾಲಿದ್, ಮ್ಯಾನೇಜಿಂಗ್ ಡೈರೆಕ್ಟರ್ ಸಯ್ಯದ್ ಇಮ್ರಾನ್ ಅಭಿನಂದನೆ ಸಲ್ಲಿಸಿದ್ದಾರೆ.